ಹಿಸ್ಸಾರ್: ಎರಡು ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಸ್ವಯಂಘೋಷಿತ ದೇವಮಾನವ ರಾಮ್ಪಾಲ್ಗೆ ಇಂದು ಹರ್ಯಾಣದ ಸ್ಥಳೀಯ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ.
ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಆರ್. ಚಾಲಿಯಾ ಅವರು ತೀರ್ಪು ಪ್ರಕಟಿಸಿದರು. 2014 ನವೆಂಬರ್ 8ರಂದು ಬರ್ವಾಲದ ಸತ್ಲೋಕ್ ಆಶ್ರಮದಲ್ಲಿ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವು ಹಾಗೂ 2014 ನವೆಂಬರ್ 19ರಂದು ರಾಂಪಾಲ್‌ನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಉಂಟಾದ ಗಲಭೆಯಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸಾವಿಗೀಡಾದ ಪ್ರಕರಣದಲ್ಲಿ ಇವರಿಗೆ ಶಿಕ್ಷೆಯಾಗಿದೆ.
ಅಂದೇ, ಕೊಲೆ, ಕೊಲೆಗ ಯತ್ನ, ಪಿತೂರಿ, ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡದ್ದು ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳು ರಾಮ್ಪಾಲ್ ಮೇಲೆ ದಾಖಲಾಗಿದ್ದವು. ತೀರ್ಪಿನಿಂದ ಗಲಭೆ ಉಂಟಾಗಬಹುದೆಂದು ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ.