ರೈತರಿಗೊಂದು ವಿನೂತನ ಆ್ಯಪ್: ರೈತರ ಯಾವುದೇ ಸಮಸ್ಯೆಗೆ ಇಲ್ಲಿ ಸಿಗಲಿದೆ ಪರಿಹಾರ

ಬೆಂಗಳೂರುರೈತರು ತಮ್ಮ ಬೆಳೆಗಳಿಗೆ ತಗಲುವ ರೋಗ, ಕೀಟಬಾಧೆ ಅಥವಾ ಪೋಷಕಾಂಶಗಳ ಕೊರತೆಯ ಲಕ್ಷಣಗಳುಳ್ಳ ಸಸ್ಯಗಳ ಛಾಯಾಚಿತ್ರವನ್ನು ಮೊಬೈಲ್ ಮೂಲಕ ತೆಗೆದು ಪ್ಲಾಂಟಿಕ್ಸ್ ಎನ್ನುವ ಆ್ಯಪ್‍ನಲ್ಲಿ ಆಪ್‍ಲೋಡ್ ಮಾಡಿದರೆ ಸಮಸ್ಯೆಯನ್ನು ಗುರುತಿಸಿ ಪರಿಹಾರ ಕ್ರಮಗಳನ್ನು ಸೂಚಿಸುವ  ನೂತನ ಆ್ಯಪ್‍ನ್ನು ಕೃಷಿ ಸಚಿವ ಶಿವಶಂಕರ ರೆಡ್ಡಿ ಸೋಮವಾರ ಬಿಡುಗಡೆ ಮಾಡಿದರು.

ವಿಕಾಸಸೌಧದ ಸಚಿವರ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಜರ್ಮಿನಿ ಮೂಲದ ಪೀಟ್ ಎನ್ನುವ ಸ್ಮಾರ್ಟ್ ಫೋನ್ ಆ್ಯಂಡ್ರ್ಯಾಯಿಡ್ ಅಪ್ಲಿಕೇಶನ್ ಕಂಪೆನಿಯು ಪ್ಲಾಂಟಿಕ್ಸ್ ಎನ್ನುವ ನೂತನ ರೈತಸ್ನೇಹಿ ಆ್ಯಪ್‍ನ್ನು ಅಭಿವೃದ್ಧಿಪಡಿಸಿದ್ದು ರೈತರಿಗೆ ಅತ್ಯಂತ ಸಹಕಾರಿಯಾದ ಆ್ಯಪ್ ಆಗಿದೆ ಎಂದು ಸಚಿವರು ತಿಳಿಸಿದರು.
ಈ ಆ್ಯಪ್‍ನ್ನು ರೈತರು ಗೂಗಲ್ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು ಇಲ್ಲಿಯವರೆಗೆ ಪ್ರತಿ ತಿಂಗಳಿಗೆ 6 ಲಕ್ಷಕ್ಕಿಂತ ಹೆಚ್ಚಿನ ರೈತರು ವಿವಿಧ ಭಾಷೆಗಳಲ್ಲಿ ಡೌನ್‍ಲೋಡ್ ಮಾಡಿಕೊಂಡಿರುತ್ತಾರೆ.  ರೈತರು ಅಪ್‍ಲೋಡ್ ಮಾಡುವ ಚಿತ್ರಗಳನ್ನು ಯಾವ ಪ್ರದೇಶದಿಂದ ಹಾಗೂ ಯಾವಾಗ ಅಪ್‍ಲೋಡ್ ಮಾಡಲಾಗಿದೆ ಎಂಬುದನ್ನು ಆಧರಿಸಿ ಅದರ ಮರುಕ್ಷಣವೇ ರೈತರಿಗೆ ಸೂಕ್ತಕ್ರಮಗಳನ್ನು ಈ ಆ್ಯಪ್ ಸೂಚಿಸುತ್ತದೆ.

ಸಸ್ಯಗಳ ಆರೋಗ್ಯ ತಪಾಸಣೆ, ರೈತರ, ವಿಜ್ಞಾನಿಗಳ ಹಾಗೂ ಆಸಕ್ತರ ಒಂದೇ ವೇದಿಕೆಯಾಗಿ  ಈ ಆ್ಯಪ್ ಕಾರ್ಯನಿರ್ವಹಿಸುವುದು ಮತ್ತು ಇದೊಂದು ಸಸ್ಯ ಪೀಡೆಗಳ ಲೈಬ್ರೆರಿಯಂತೆ ಕಾರ್ಯನಿರ್ವಹಿಸುತ್ತದೆ.   ಯಾವುದೇ ಪ್ರದೇಶದಲ್ಲಿ ಈ ಆ್ಯಪ್ ಮೂಲಕ ಅಲ್ಲಿನ ಹವಾಮಾನ, ತಪಾಮಾನ, ಮಳೆ ಕುರಿತಂತೆ ಮುನ್ಸೂಚನೆಗಳನ್ನು ಸಹ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಕ್ರಿಸ್ಯಾಟ್ ಸಂಸ್ಥೆಯ ಡಿಜಿಟಲ್ ಅಗ್ರಿಕಲ್ಚರ್ ವಿಭಾಗದ ವಿಜ್ಞಾನಿ ಡಾ. ಶ್ರೀಕಾಂತ ರೂಪಾವತರಾಮ್  r.srikanth@cgiar.org. ಹಾಗೂ   ಜರ್ಮನಿಯ ಪೀಟ್ ಸಂಸ್ಥೆಯ ಬಿಯಾಂಕಾ   bianca@peat.ai bianca@peat.ai
ಇಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ