ಬೆಂಗಳೂರು, ಅ.16- ಬೆಂಗಳೂರು ವಿವಿಪುರಂ ಉಪ ವಿಭಾಗದ ಪೊಲೀಸರು ಐವರು ಮನೆಗಳ್ಳರನ್ನು ಬಂಧಿಸಿ 31 ಪ್ರಕರಣಗಳನ್ನು ಪತ್ತೆ ಹಚ್ಚಿ 84 ಲಕ್ಷ ರೂ. ಮೌಲ್ಯದ 2.62 ಕೆ.ಜಿ. ಚಿನ್ನ, 4.20 ಕೆಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಹನುಮಂತ ನಗರ ಪೆÇಲೀಸರು ಇಮ್ರಾನ್ ಖಾನ್ ಅಲಿಯಾಸ್ ಶೇರ್ ಇಮ್ರಾನ್, ಕದೀರ್ ಅಹ್ಮದ್ ಎಂಬವರನ್ನು ಬಂಧಿಸಿ 7 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಇವರಿಬ್ಬರೂ 35ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ವಿಲಾಸಿ ಜೀವನಕ್ಕಾಗಿ ಮನೆಗಳ್ಳತನ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಅದೇ ಕೃತ್ಯದಲ್ಲಿ ತೊಡಗುತ್ತಿದ್ದರು. ಇವರು ಕದ್ದ ಮಾಲನ್ನು ರಾಜಸ್ತಾನದ ಅಜ್ಮೀರ್ನಲ್ಲಿ ಮಾರಾಟ ಮಾಡಿದ್ದರು. ಪೆÇಲೀಸರು ಅಲ್ಲಿಗೆ ತೆರಳಿ ಚ್ನಿನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಹನುಮಂತನಗರ, ಪುಟ್ಟೇನಹಳ್ಳಿ, ಜೆ.ಪಿನಗರ, ಸುದ್ದಗುಂಟೆಪಾಳ್ಯ ಪೆÇಲೀಸ್ ಠಾಣೆಗಳು, ಮೈಸೂರು ನಗರದ ಲಷ್ಕರ್ ಮತ್ತು ಮಂಡಿ ಪೆÇಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 7 ಕನ್ನಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 24 ಲಕ್ಷ ರೂ. ಬೆಲೆಬಾಳುವ ಸುಮಾರು 800 ಗ್ರಾಂ ತೂಕದ ಚಿನ್ನದ ಆಭರಣಗಳು, ಸುಮಾರು 2 ಕೆ.ಜಿ. 200 ಗ್ರಾಂ ತೂಕದ ಬೆಳ್ಳಿಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿಲಾಸಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದವರ ಸೆರೆ
ವಿಲಾಸಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿ.ಕೆ.ಅಚ್ಚುಕಟ್ಟು ಪೆÇಲೀಸರು, ಆರೋಪಿಗಳಿಂದ 41.70 ಲಕ್ಷ ರೂ. ಬೆಲೆಬಾಳುವ 1200 ಗ್ರಾಂ ತೂಕದ ಚಿನ್ನದ ಒಡವೆಗಳು, 20 ಗ್ರಾಂ ತೂಕದ ಒಂದು ಡೈಮಂಡ್ ಬಳೆ, ಸುಮಾರು 2 ಕೆ.ಜಿ. ತೂಕದ ಬೆಳ್ಳಿಯ ಸಾಮಗ್ರಿಗಳು ಹಾಗೂ 2 ಪಲ್ಸರ್ ವಾಹನಗಳನ್ನು ಕೃತ್ಯಕ್ಕೆ ಬಳಸಿದ ಎರಡು ಅಪಾಚಿ ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಗಸಂದ್ರ ದೊಡ್ಡ ಬಿದರಕಲ್ಲು ಮುನೇಶ್ವರ ಬಡಾವಣೆ 1ನೆ ಅಡ್ಡ ರಸ್ತೆಯ 3ನೆ ಮೈನ್ ರೋಡ್ ನಿವಾಸಿ ಮಹೇಶ್ (25), ಅಂದ್ರಳ್ಳಿ ಮೈನ್ ರೋಡ್ ಚೇತನ್ ಸರ್ಕಲ್ ಪಿ.ಜಿ.ರೋಡ್ ನಿವಾಸಿ ದಯಾನಂದ್ (21) ಬಂಧಿತ ಆರೋಪಿಗಳು.
ಸಿ.ಕೆ.ಅಚ್ಚುಕಟ್ಟು ಪೆÇಲೀಸ್ ಠಾಣೆಗೆ ಸಂಬಂಧಿಸಿದ 7 ಕನ್ನಕಳವು, ಗಿರಿನಗರ ಠಾಣೆಯ 1 ಕನ್ನಕಳವು, ಬನಶಂಕರಿಯ 1, ವಿಜಯನಗರ ಠಾಣೆಯ ಒಂದು ವಾಹನ ಕಳವು ಪ್ರಕರಣ ಸೇರಿ ಒಟ್ಟು 10ಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಮಹೇಶ್ ಹಳೆಯ ಆರೋಪಿಯಾಗಿದ್ದು, ಈತನ ವಿರುದ್ಧ ತಾವರೆಕೆರೆ ಪೆÇಲೀಸ್ ಠಾಣೆಯ 6 ಕನ್ನಗಳವು, ಕಬ್ಬನ್ಪಾರ್ಕ್ ಠಾಣೆಯ 2 ಪ್ರಕರಣ, ಬ್ಯಾಡರಹಳ್ಳಿಯ ಒಂದು ಕನ್ನಗಳವು ಪ್ರಕರಣ ದಾಖಲಾಗಿವೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪೆÇಲೀಸ್ ತಂಡಕ್ಕೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ ಪೆÇಲೀಸ್ ಆಯುಕ್ತರು, ಸಾರ್ವಜನಿಕರು ಕಳ್ಳರ ಬಗ್ಗೆ ಎಚ್ಚರಿಕೆ ವಹಿಸಬೇಕು. ಪೆÇಲೀಸರು ನೀಡುವ ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.