ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಅಭ್ಯರ್ಥಿಗಳ ನಿರ್ಧಾರ ಕಾಂಗ್ರೆಸ್‌ ರಣನೀತಿಯಲ್ಲೊಂದು: ಡಿಸಿಎಂ

ಬೆಂಗಳೂರು: ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಅಭ್ಯರ್ಥಿಗಳ ನಿರ್ಧಾರ ಕಾಂಗ್ರೆಸ್‌ ರಣನೀತಿಯಲ್ಲೊಂದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಉಗ್ರಪ್ಪ ಅವರನ್ನು ಬಳ್ಳಾರಿಯಲ್ಲಿ, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಕಣಕ್ಕಿಳಿಸಿದ್ದೇವೆ. ಇದು ಚುನಾವಣೆ ರಣನೀತಿ. ಇದನ್ನು‌ಕಾಂಗ್ರೆಸ್‌ ದುರ್ಬಲ‌ಎಂದು ವ್ಯಾಖ್ಯಾನಿಸುವುದು ಅರಿಯಲ್ಲ. ಈ ರಣನೀತಿಯ ಹಿಂದಿನ‌ಉದ್ದೇಶ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಿಳಿಯಲಿದೆ ಎಂದರು.

ಮಂಡ್ಯ ಹಾಗೂ ರಾಮನಗರದಲ್ಲಿ ಉಪಯುಕ್ತ ಕೆಲಸಕ್ಕೆ ಹೊಂದಾಣಿಕೆ ಮುಖ್ಯವಾಗಿದೆ. ಹೀಗಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಬಾಲಕೃಷ್ಣ ಬಿಜೆಪಿ ಸೇರ್ಪಡೆ ವಿಚಾರ ತಿಳಿದಿಲ್ಲ. ಅವರು ನಮ್ಮ ಸಿದ್ಧಾಂತ ಒಪ್ಪಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ