ಬೆಂಗಳೂರು, ಸೆ.15- ಕೇವಲ ಆರು ಅಡಿ ಜಾಗಕ್ಕಾಗಿ ಹಾಡಹಗಲೇ ಶಾಲಾ ಮುಖ್ಯಸ್ಥನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಕೆಲವೇ ಗಂಟೆಗಳಲ್ಲಿ ಗುಂಡು ಹಾರಿಸಿ ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಮಾಗಡಿ ರಸ್ತೆ ಠಾಣೆ ಪೆÇಲೀಸರು ಶೋಧ ನಡೆಸುತ್ತಿದ್ದಾರೆ.
ಮುನಿರಾಜು ಅಲಿಯಾಸ್ ಬಬ್ಲಿ (25) ಪೆÇಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ.
ಹಾವನೂರು ಪಬ್ಲಿಕ್ ಶಾಲೆ ಮುಖ್ಯಸ್ಥ ರಂಗನಾಥ್ (64) ಕೊಲೆ ಪ್ರಕರಣದಲ್ಲಿ ನಾಲ್ಕರಿಂದ ಐದು ಮಂದಿ ಪ್ರತ್ಯಕ್ಷವಾಗಿ ಭಾಗಿಯಾಗಿರುವುದು ತಿಳಿದುಬಂದಿದ್ದು, ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ತಿಳಿಸಿದ್ದಾರೆ.
ನಿನ್ನೆ ಶಾಲೆಯಲ್ಲಿ ಯಾವುದೇ ವಿಶೇಷ ತರಗತಿ ನಡೆಯುತ್ತಿರಲಿಲ್ಲ. ಕೇವಲ ಆರು ಅಡಿ ಜಾಗದ ವಿಚಾರಕ್ಕೆ ಶಾಲೆಯ ಪಕ್ಕದ ಮನೆಯವರಿಗೂ ಇವರಿಗೂ ವಿವಾದವಿತ್ತು. ಈ ವಿಚಾರವಾಗಿ ಮಧ್ಯವರ್ತಿಗಳು ಮಾತನಾಡುವ ಸಂಬಂಧ ಶಾಲೆ ಬಳಿ ಬರುವುದಾಗಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ 9.30ರ ಸುಮಾರಿಗೆ ರಂಗನಾಥ್ ಶಾಲೆಗೆ ಬಂದು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ನಾಲ್ಕು ಮಂದಿ ಸಿಬ್ಬಂದಿಗಳು ಸಹ ಬಂದಿದ್ದರು.
ಜಾಗದ ವಿಚಾರವಾಗಿ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸಿಕೊಂಡು ಬಂದಿದ್ದ ರಾಜಶೇಖರ್ ಎಂಬುವವರೊಂದಿಗೆ ರಂಗನಾಥ್ ಮಾತನಾಡುತ್ತಿದ್ದಾಗ ಏಕಾಏಕಿ ಕೊಠಡಿಯೊಳಗೆ ನುಗ್ಗಿದ ನಾಲ್ಕೈದು ಮಂದಿ ದುಷ್ಕರ್ಮಿಗಳು ರಂಗನಾಥ್ ಅವರ ಬಾಯಿಮುಚ್ಚಿ ಚಾಕುವಿನಿಂದ ಹೊಟ್ಟೆ, ಹಣೆ, ಎದೆ ಇನ್ನಿತರ ಭಾಗಗಳಿಗೆ ಮನಸೋ ಇಚ್ಛೆ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾಗಡಿ ರಸ್ತೆ ಠಾಣೆ ಪೆÇಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಇನ್ಸ್ಪೆಕ್ಟರ್ ಹೇಮಂತ್ಕುಮಾರ್ ಅವರಿಗೆ ಮಾಹಿತಿಯೊಂದು ಬಂದಿದ್ದು, ಈ ಪ್ರಕರಣದ ಆರೋಪಿಗಳ ಪೈಕಿ ಮುನಿರಾಜು ಅಲಿಯಾಸ್ ಬಬ್ಲಿ ಎಂಬಾತ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಕಿರ್ಲೋಸ್ಕರ್ ಪೌಲ್ಟ್ರಿ ರಸ್ತೆಯಲ್ಲಿ ಮಧ್ಯಾಹ್ನ ಇರುವುದು ಗೊತ್ತಾಗಿದೆ.
ತಕ್ಷಣ ಕಾನ್ಸ್ಟೆಬಲ್ಗಳಾದ ನವೀನ್, ಶ್ರೀನಿವಾಸ್ ಅವರೊಂದಿಗೆ ಸ್ಥಳಕ್ಕೆ ತೆರಳಿದ ಇನ್ಸ್ಪೆಕ್ಟರ್ ಹೇಮಂತ್ಕುಮಾರ್ ಆರೋಪಿಯನ್ನು ಬಂಧಿಸಲು ಹೋದಾಗ ಕಾನ್ಸ್ಟೆಬಲ್ಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ತಕ್ಷಣ ಎಚ್ಚೆತ್ತುಕೊಂಡ ಇನ್ಸ್ಪೆಕ್ಟರ್ ಹೇಮಂತ್ಕುಮಾರ್ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಬಬ್ಲಿ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ಈ ವೇಳೆ ಆತನನ್ನು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಪರಾರಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.