ಬಳ್ಳಾರಿ ಲೋಕಸಭೆ ಉಪ ಚುನಾವಣೆ: ಕಾಂಗ್ರೆಸ್ ನಿಂದ ಉಗ್ರಪ್ಪ ಕಣಕ್ಕೆ

ಬೆಂಗಳೂರು, ಅ.15- ಬಳ್ಳಾರಿ ಲೋಕಸಭೆ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕೊನೆ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದು, ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮತ್ತು ಮುಖಂಡ ವೆಂಕಟೇಶಪ್ರಸಾದ್ ಅವರ ನಡುವೆ ಪ್ರಬಲ ಪೈಪೆÇೀಟಿ ನಡೆದು ಅಂತಿಮವಾಗಿ ಹೈ ಕಮಾಂಡ್ ಉಗ್ರಪ್ಪ ಅವರನ್ನು ಕಣಕ್ಕಿಳಿಸಿದೆ.

ನಾಳೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುವುದರಿಂದ ಇಂದು ಸಂಜೆ ಒಳಗಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಅನಿವಾರ್ಯತೆ ಇದ್ದರೂ ಕಾಂಗ್ರೆಸ್ ನಾಯಕರು ತೀವ್ರ ಗೊಂದಲದಲ್ಲಿದ್ದಾರೆ.

ಬಳ್ಳಾರಿ ಜಿಲ್ಲೆಯ ಶಾಸಕರು ಪರಸ್ಪರ ಗುಂಪುಗಳಾಗಿದ್ದರಿಂದ ಅಂತಿಮ ಹಂತದಲ್ಲಿ ವೆಂಕಟೇಶ್‍ಪ್ರಸಾದ್ ಅವರಿಗೆ ಹಿನ್ನಡೆಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ ವಿ.ಎಸ್.ಉಗ್ರಪ್ಪ ಮುಂಚೂಣಿಗೆ ಬಂದಿದ್ದರು. ಆದರೆ, ಉಗ್ರಪ್ಪ ಅವರನ್ನು ಸ್ಪರ್ಧಿ ಎಂದು ಒಪ್ಪಿಕೊಳ್ಳಲು ಜಿಲ್ಲೆಯ ಆರು ಮಂದಿ ಕಾಂಗ್ರೆಸ್ ಶಾಸಕರು ಸಿದ್ದರಿಲ್ಲದೇ ಇರುವುದರಿಂದ ಅಂತಿಮ ಆಯ್ಕೆಯನ್ನು ಕಾಂಗ್ರೆಸ್ ವರಿಷ್ಠರಿಗೆ ಬಿಡಲಾಗಿತ್ತು.

ಮಧ್ಯಾಹ್ನ 2 ಗಂಟೆಯವರೆಗೂ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಹೈಕಮಾಂಡ್‍ನ ಫೆÇೀನ್ ಕರೆಗೆ ಕಾದು ಕುಳಿತಿದ್ದರು. ಬಳ್ಳಾರಿಯಿಂದ ಸ್ಪರ್ಧಿಸಲು ಸುಮಾರು 14ಮಂದಿ ಆಕಾಂಕ್ಷಿಗಳಿದ್ದು, ಸ್ಥಳೀಯವಾಗಿ ವೆಂಕಟೇಶಪ್ರಸಾದ್ ಪ್ರಬಲವಾಗಿದ್ದಾರೆ. ಆದರೆ, ಅವರಿಗಿಂತಲೂ ಬಳ್ಳಾರಿ ಜಿಲ್ಲೆಯ ಅಕ್ರಮ ಗಣಿಗಾರಿಕೆ ಬಗ್ಗೆ ಸಮಗ್ರ ಅಧ್ಯಯನ ನಡೆಸಿರುವ ವಿ.ಎಸ್.ಉಗ್ರಪ್ಪ ಅವರನ್ನು ಕಣಕ್ಕಿಳಿಸಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಲಾಭವಾಗಲಿದೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಉಗ್ರಪ್ಪ ಅವರ ಪರವಾಗಿ ಲಾಬಿ ಆರಂಭಿಸಿದ್ದಾರೆ. ಇದು ಹೈಕಮಾಂಡ್‍ಗೂ ತಲೆ ಬಿಸಿ ತಂದಿತ್ತು. ಕೊನೆಗೆ ಸ್ಥಳಿಯ ರಾಜಕೀಯದಲ್ಲಿ ಒಡಕು ಮೂಡಿಸಲು ಅವಕಾಶ ನೀಡಬಾರದು ಎಂದು ಹೈ ಕಮಾಂಡ್ ಉಗ್ರಪ್ಪ ಅವರಿಗೆ ಟಿಕೆಟ್ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ