ಬೆಂಗಳೂರು, ಅ.14- ಭಾರತದಲ್ಲಿ ಸಂಧಿವಾತ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ.
30 ರಿಂದ 50 ವರ್ಷ ವಯೋಮಾನದ ಮಹಿಳೆಯರಲ್ಲಿ ಈ ಪ್ರಮಾಣ ಹೆಚ್ಚಾಗುತ್ತಿದೆ. ಸಂಧಿವಾತಕ್ಕೆ ತುತ್ತಾದವರ ಭಾರತೀಯರ ಸಂಖ್ಯೆ ಶೇ.0.5 ರಿಂದ ಶೇ.0.75ರಷ್ಟು.
ಸಂಧಿವಾತಕ್ಕೆ ತುತ್ತಾಗುತ್ತಿರುವವರಲ್ಲಿ ಹೆಚ್ಚಿನವರು ಧೂಮಪಾನಿಗಳಾಗಿದ್ದಾರೆ. ಆದರೂ ಈ ಸಂಧಿವಾತ ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರನ್ನೂ ಬಾಧಿಸುತ್ತಿದೆ ಎಂದು ವಿಶ್ವ ಸಂಧಿವಾತ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಕ್ರಂ ಆಸ್ಪತ್ರೆ ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಧಿವಾತ ತಜ್ಞ ಡಾ.ಬಿ.ಜಿ.ಧರ್ಮಾನಂದ ಮಾತನಾಡಿ, ಭಾರತದಲ್ಲಿ ಸಂಧಿವಾತ ತಜ್ಞರ ಕೊರತೆ ಎದ್ದು ಕಾಣುತ್ತಿದೆ. ಇದರ ಪರಿಣಾಮ ಇರುವ ವೈದ್ಯರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂದು ಹೇಳಿದರು.