‘ಜಂಟಲ್ ಮ್ಯಾನ್’ ಗೆ ನಿಶ್ವಿಕಾ ನಾಯ್ಡು ನಾಯಕಿ!

ಬೆಂಗಳೂರು: ನಿರ್ದೇಶಕ ಗುರು ದೇಶಪಾಂಡೆ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ “ಜಂಟಲ್ ಮ್ಯಾನ್” ಗೆ ನಾಯಕಿ ಸಿಕ್ಕಿದ್ದಾಳೆ. ನಿಶ್ವಿಕಾ ನಾಯ್ಡು ಜಂಟಲ್ ಮ್ಯಾನ್  ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಜಗದೀಶ್ ಕುಮಾರ್ ಹಂಪಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿಶ್ವಿಕಾ ನಾಯ್ಡು ಗುರು ದೇಶಪಾಂಡೆ ಸಹಯೋಗದಲ್ಲಿ ಇದು ಎರಡನೇ ಬಾರಿಗೆ ಅಭಿನಯಕ್ಕಿಳಿದಿದ್ದಾರೆ.ಇದಕ್ಕೆ ಮುನ್ನ ಶ್ರೇಯಸ್ ಮಂಜು ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ “ಪಡ್ಡೆಹುಲಿ” ಚಿತ್ರಕ್ಕೆ ಸಹ ಅವರು ಸಹಿ ಹಾಕಿದ್ದರು. ನಿಶ್ವಿಕಾ ಅವರ ವೃತ್ತಿಪರತೆ, ಬದ್ದತೆಗಳು ತಮಗೆ ಇಷ್ಟವಾಗಿದ್ದು ಇದಕ್ಕಾಗಿ ಆಕೆಗೆ ಇನ್ನೊಂದು ಅವಕಾಶ ನೀಡುತ್ತಿರುವುದಾಗಿ ನಿರ್ಮಾಪಕ ಗುರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ