ಮಲೆನಾಡು ಭಾಗದಲ್ಲಿ ಮತ್ತೆ ಆರಂಭವಾದ ನಕ್ಸಲ್ ಚಟುವಟಿಕೆ: ಎಎನ್‍ಎಫ್ ಕಾರ್ಯಾಚರಣೆ

ಬೆಂಗಳೂರು,ಅ.13-ಮಲೆನಾಡು ಭಾಗದಲ್ಲಿ ಮತ್ತೆ ನಕ್ಸಲೀಯರ ಚಟುವಟಿಕೆಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್‍ಎಫ್) ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿದೆ.

ಸಾರ್ವಜನಿಕರೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿರುವುದು ಹಾಗೂ ಆಂಧ್ರ ಪ್ರದೇಶದ ಟಿಡಿಪಿ ಶಾಸಕರ ಹತ್ಯೆ ಪ್ರಕರಣದಲ್ಲಿ ಸ್ಥಳೀಯ ನಕ್ಸಲೀಯರ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ ಎಎನ್‍ಎಫ್ ಕಾರ್ಯಾಚರಣೆಯನ್ನು ಮುಂದುವರೆಸಿದೆ.

ಶೃಂಗೇರಿ, ಮೂಡಿಗೆರೆ, ತೀರ್ಥಹಳ್ಳಿ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎಎನ್‍ಎಫ್ ತಂಡ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.
ಎರಡು ವಾರಗಳ ಹಿಂದೆ ಆಂಧ್ರಪ್ರದೇಶದಲ್ಲಿ ಟಿಡಿಪಿ ಶಾಸಕ ಹಾಗೂ ಮಾಜಿ ಶಾಸಕರ ಹತ್ಯೆಯಲ್ಲಿ ಕರ್ನಾಟಕದ ಇಬ್ಬರು ನಕ್ಸಲೀಯರ ಕೈವಾಡ ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದಿಂದ ಬಂದಿರುವ ವಿಶೇಷ ತನಿಖಾ ತಂಡ ನೀಡಿರುವ ಮಾಹಿತಿ ಆಧರಿಸಿ ನಕ್ಸಲೀಯರ ಪತ್ತೆಗಾಗಿ ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ.
ಈ ಸಂಬಂಧ ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರಿಗೆ ಸ್ಥಳೀಯ ನಕ್ಸಲೀಯರ ಪಾತ್ರ ಕುರಿತಂತೆ ಮಾಹಿತಿ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಡಿಜಿ ಅವರು ಎಎನ್‍ಎಫ್ ಮುಖ್ಯಸ್ಥರ ಜೊತೆ ನಕ್ಸಲೀಯರ ಚಟುವಟಿಕೆಗಳ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದ್ದರು. ಹೀಗಾಗಿ ನಕ್ಸಲ್ ತಾಣಗಳ ಮೇಲೆ ಕೂಂಬಿಂಗ್ ಕಾಯಾಚರಣೆಯನ್ನು ನಡೆಸಲಾಗಿದೆ.

ಎಫ್‍ಐಆರ್ ದಾಖಲು:
ಸಾರ್ವಜನಿಕರೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಎಂಟು ಮಂದಿ ನಕ್ಸಲೀಯರ ವಿರುದ್ಧ ಕುದುರೆಮುಖ ಪೆÇಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ನಕ್ಸಲೀಯರಾದ ಬಿ.ಜಿ.ಕೃಷ್ಣಮೂರ್ತಿ, ಮಂಡಗಾರು ಲತಾ ಕೃಷ್ಣ ಸೇರಿದಂತೆ ಒಟ್ಟು 8 ಮಂದಿ ನಕ್ಸಲೀಯರ ವಿರುದ್ಧ ಕುದುರೆಮುಖ ಪೆÇಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಎಫ್‍ಐಆರ್ ದಾಖಲಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಗುಳ್ಯ ಗ್ರಾಮದ ವಾಸುದೇವ್ ಎಂಬುವರ ಮನೆಗೆ ನುಗ್ಗಿ ಈ ನಕ್ಸಲೀಯರು ತಮ್ಮ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಬಿ.ಜೆ.ಕೃಷ್ಣಮೂರ್ತಿ, ಮಂಡಗಾರು ಲತಾ ಕೃಷ್ಣ ನೇತೃತ್ವದ ತಂಡ ಮಧ್ಯರಾತ್ರಿ ವಾಸುದೇವ್ ಅವರ ಮನೆಗೆ ನುಗ್ಗಿ ಪೆÇಲೀಸರಿಗೆ ನಮ್ಮ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದೀರಿ. ಇನ್ನು ಮುಂದೆ ಪೆÇಲೀಸ್ ಮಾಹಿತಿದಾರರಾಗಿ ಕೆಲಸ ಮಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗಿದೆ.

ತಮಗೆ ನಕ್ಸಲೀಯರಿಂದ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ನೀಡಿ ಎಂದು ವಾಸುದೇವ್ ಕುದುರೆಮುಖ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪೆÇಲೀಸರು ಎಫ್‍ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ