
ಮುಂಬೈ: ಖ್ಯಾತ ಹಿಂದೂಸ್ಥಾನಿ ಸಂಗೀತಗಾರರಾಗಿದ್ದ ಅನ್ನಪೂರ್ಣ ದೇವಿ (91) ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ವಿಜೇತರಾಗಿದ್ದ ಅನ್ನಪೂರ್ಣ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಶನಿವಾರ ಮುಂಜಾನೆ 3.51ಕ್ಕೆ ಅಸುನೀಗಿದರು.
ಹಿಂದೂಸ್ಥಾನ ಶಾಸ್ತ್ರೀಯ ಸಂಗೀತದಲ್ಲಿ ಸುರ್ಬಹಾರ್ ವಾದ್ಯವನ್ನು ಅವರು ನುಡಿಸುತ್ತಿದ್ದರು. ಇವರು ಅಲ್ಲಾವುದ್ದೀನ್ ಖಾನ್ ಮಗಳು ಮತ್ತು ಶಿಷ್ಯೆಯಾಗಿದ್ದರು.
ಮಧ್ಯಪ್ರದೇಶದ ಮೈಹರ್ನಲ್ಲಿ 1927ರಲ್ಲಿ ಜನಿಸಿದ್ದ ಅನ್ನಪೂರ್ಣ ದೇವಿ, ಪಂಡಿತ್ ರವಿಶಂಕರ್ ಅವರನ್ನು ಮದುವೆಯಾಗಿದ್ದರು. ಅವರ ನಿಧನದ ಬಳಿಕ ರುಷಿಕುಮಾರ್ ಪಾಂಡ್ಯ ಅವರನ್ನು ಮದುವೆಯಾಗಿದ್ದರು.