ಪಾಕ್ ಮಾಜಿ ನಾಯಕನಿಂದ ಲಂಚದ ಆಮೀಷ:ಶೇನ್ ವಾರ್ನ್‍ನಿಂದ ಹೊಸ ಬಾಂಬ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲೀಂ ಮಲ್ಲಿಕ್ ತಮಗೆ 2 ಲಕ್ಷ ಯುಎಸ್ ಡಾಲರ್ ಲಂಚ ನೀಡಲು ಬಂದಿದ್ದರು ಎಂದು ಕ್ರಿಕೆಟ್ ದಂತೆ ಕತೆ ಶೇನ್ ವಾರ್ನೆ ಹೊಸ ಬಂಬ್ ಸಿಡಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಹಲವಾರು ವರ್ಷಗಳ ನಂತರ ನಿವೃತ್ತಿ ಘೋಷಿಸಿದ ನಂತರ ತಮ್ಮ ಆತ್ಮ ಚರಿತ್ರೆ ನೋ ಸ್ಪಿನ್ ಪುಸ್ತಕದಲ್ಲಿ ವಿಶ್ವ ಕ್ರಿಕೆಟ್ ಬೆಚ್ಚಿಬೀಳುವ ಸಂಗತಿಗಳನ್ನ ಹೊರ ಹಾಕಿದ್ದಾರೆ. ಆಸೀಸ್‍ನ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಇದೀಗ ಹೊಸ ಬಂಬ್‍ವೊಂದನ್ನ ಸಿಡಿಸಿದ್ದಾರೆ. ಸಂದರ್ಶನವೊಂದರಲ್ಲಿ ವಾರ್ನ್,
ಅದು 1994ರಲ್ಲಿ ಅಸ್ಟ್ರೇಲಿಯಾ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಅಂದಿನ ಪಾಕ್ ನಾಯಕ ಸಲೀಂ ಮಲ್ಲಿಕ್ ಶೇನ್ ವಾರ್ನೆ ಬಳಿ ಬಂದು ಸರಣಿಯಲ್ಲಿ ನೀವು ಸೋಲಬೇಕೆಂದು ಹೇಳಿ 2ಲಕ್ಷ ಯುಎಸ್ ಡಾಲರ್ ಹಣ ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಹೇಳಿದ್ದಾರೆ.
ಸರಣಿಗೂ ಮುನ್ನ ನನ್ನನ್ನ ಸಂಪರ್ಕಿಸಿದ ಸಲೀಂ ಮಲ್ಲಿಕ್, ಆಫ್ ಸ್ಟಂಪ್‍ನತ್ತ ವೈಡ್ ಹಾಕಿದರೆ ಇನು ಅರ್ಧ ಗಂಟೆಯಲ್ಲಿ ನಿನ್ನ ರೂಮ್‍ನಲ್ಲಿ ಹಣ ಇರುತ್ತೆ ಎಂದು ಹೇಳಿರುವುದಾಗಿ ವಾರ್ನ್ ನನಪಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ