ಕೌಲಲಾಂಪುರ: ಹೊಡಿ ಬಡಿ ಆಟ ಟಿ20 ಕ್ರಿಕೆಟ್ ಅಂದ್ಮೇಲೆ ಅಲ್ಲಿ ಬೌಂಡರಿ ಸಿಕ್ಸರ್ಗಳ ಅಬ್ಬರದ ಇದ್ದೆ ಇರುತ್ತೆ. ಎಂಥಹ ವೀಕ್ ಟೀಂಗಳು ಕೂಡ ಬಲಿಷ್ಠ ತಂಡಗಳಿಗೆ ದೊಡ್ಡ ಫೈಟ್ ಕೊಟ್ಟು ರನ್ ಮಳೆಯ ಹರಿದು ಬರುತ್ತೆ. ಆದರೆ ಇಲ್ಲೊಂದು ನಡೆದಿರುವ ಟಿ20 ಪಂದ್ಯ ಚುಟುಕು ಪಾರ್ಮೆಟ್ನಲ್ಲಿ ಏನು ಬೇಕಾದ್ರು ನಡೆಯುತ್ತೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.
ಇದು ಯಾವುದೋ ಹಾದಿ ಬೀದಿಯಲ್ಲಿ ನಡೆಯೋ ಗಲ್ಲಿ ಕ್ರಿಕೆಟ್ ಅಲ್ಲ. ಮಲೇಷ್ಯಾದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟಿ20 ಅರ್ಹತಾ ಟೂರ್ನಿ . ಅರ್ಹತಾ ಟೂರ್ನಿಯಲ್ಲಿ ಆತಿಥೇಯ ಮಲೇಷ್ಯಾ ಮತ್ತು ಮಯನ್ಮಾರ್ ತಂಡಗಳು ಮುಖಾಮುಖಿಯಾಗಿದ್ದವು. ಇಡೀ ಪಂದ್ಯದಲ್ಲಿ ಉಭಯ ತಂಡಗಳು ಆಡಿದ್ದು ಒಟ್ಟು 11.5 ಓವರ್ಗಳನ್ನ ಆಡಿ ಗಳಿಸಿದ್ದು 15 ರನ್. ಒಟ್ಟು 10 ವಿಕೆಟ್ಗಳು ಪತನವಾದವು.
ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಯನ್ಮಾರ್ 10.1 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 9 ರನ್ಗಳಿಸಿ ಆಡುತ್ತಿದ್ದಾಗ ಮಳೆ ಸುರಿಯಿತು. ಈಗಾಗಿ ಡಕ್ವರ್ಥ್ ಲೂಹಿಸ್ ನಿಯಮ ಅಳವಡಿಸಿ ಮಲೇಷ್ಯಾ ತಂಡಕ್ಕೆ 8 ಓವರ್ಗಳಲ್ಲಿ 6 ರನ್ಗಳ ಟಾರ್ಗೆಟ್ ನೀಡಲಾಯಿತು. ಗುರಿ ಬೆನ್ನತ್ತಿದ ಮಲೇಷ್ಯಾ ತಂಡ ಮೊದಲ ಓವರ್ನ್ಲಲೆ ಎರಡು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಎರಡನೇ ಓವರ್ನಲ್ಲಿ 6 ರನ್ಗಳ ಗುರಿ ಬೆನ್ನತ್ತಿ ಮಲೇಷ್ಯಾ 8 ವಿಕೆಟ್ಗಳ ಗೆಲುವಿನ ನಗೆ ಬೀರಿತು. ವಿಶ್ವ ಕ್ರಿಕೆಟ್ನಲ್ಲಿ ಇದೊಂದು ಅಪರೂಪದ ಪಂದ್ಯವಾಗಿ ಹೊರಹೊಮ್ಮಿತ್ತು.