ನಾನಾ ಪಾಟೇಕರ್ ಹಾಗೂ ಗಣೇಶ್ ಆಚಾರ್ಯ ವಿರುದ್ಧ ಎಫ್​ಐಆರ್ ದಾಖಲು

ಮುಂಬೈ: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್​ ಮತ್ತು ಕೊರಿಯೋಗ್ರಾಫರ್​ ಗಣೇಶ್​ ಆಚಾರ್ಯ ವಿರುದ್ಧ ನಟಿ ತನುಶ್ರೀ ದತ್ತಾ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಹಾಗೂ ದೂರಿನ ಆಧಾರದ ಮೇಲೆ ನಾನಾ ಹಾಗೂ ಗಣೇಶ್ ಆಚಾರ್ಯ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

2008ರಲ್ಲಿ ‘ಹಾರ್ನ್​​ ಓಕೆ ಪ್ಲೀಸ್​ ‘ ಚಿತ್ರದ ಶೂಟಿಂಗ್​ ವೇಳೆ ನಾನಾ ಪಾಟೇಕರ್​ ಮತ್ತು ಚಿತ್ರದ ನಿರ್ದೇಶಕ ರಾಕೇಶ್​ ಸಾರಂಗ್​, ನಿರ್ಮಾಪಕ ಸಮ್ಮಿ ಸಿದ್ದಿಕಿ ಹಾಗೂ ಗಣೇಶ್​ ಆಚಾರ್ಯ ಅವರು ಅನುಚಿತವಾಗಿ ವರ್ತಿಸಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ತನುಶ್ರೀ ಆರೋಪಿಗಳ ವಿರುದ್ಧ 2 ಪುಟಗಳ ಲಿಖಿತ ದೂರು ನೀಡಿದ್ದರು.

ಇವರ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್​ 354 ಮತ್ತು 509ರ ಪ್ರಕಾರ ಮುಂಬೈನ ಓಶಿವಾರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ಇನ್ನು ತನುಶ್ರೀ ದತ್ತಾ ಅವರ ವಕೀಲರು ಬುಧವಾರ ಮುಂಬೈ ಪೊಲೀಸ್​ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ತಮ್ಮ ಆರೋಪಕ್ಕೆ ಪೂರಕವಾದ 40 ಪುಟಗಳ ದಾಖಲೆಯನ್ನು ಸಲ್ಲಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ