ಬೆಂಗಳೂರು,ಅ.9- ವೃತ್ತಿಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರಿಗಿರುವ ಸೌಲಭ್ಯವನ್ನು ನೀಡಬೇಕು ಮತ್ತು ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ರಾಜ್ಯ ನೇಕಾರರ ಸೇವಾ ಸಂಘ ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಿ.ಶಿವಲಿಂಗ ತಿರಾಗಿ, ರಾಜ್ಯದಲ್ಲಿ 66 ಲಕ್ಷ ನೇಕಾರರು ಇದ್ದು , ಸುಮಾರು 45 ವರ್ಷಗಳಿಂದ ನೂಲು ನೇಕಾರ ಕಾರ್ಮಿಕರಾಗಿಯೇ ಬದುಕು ಸಾಗಿಸುತ್ತ ಬಂದಿದ್ದೇವೆ ಎಂದರು.
ನಾವು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ಹಾಗಾಗಿ ವೃತ್ತಿಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರಿಗಿರುವ ಸೌಲಭ್ಯವನ್ನು ನಮಗೂ ಒದಗಿಸಬೇಕು ಹಾಗೂ ಉಚಿತ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡಿದರು.