ನಂದಿನಿ ಬಡಾವಣೆಯಲ್ಲಿ ನವರಾತ್ರಿ ಹಾಗೂ ನಂದಿನಿ ಉತ್ಸವ

ಬೆಂಗಳೂರು, ಅ.9-ಪ್ರತಿ ವರ್ಷದಂತೆ ಈ ವರ್ಷವೂ ನಂದಿನಿ ಬಡಾವಣೆಯಲ್ಲಿ ನವರಾತ್ರಿ ಹಾಗೂ ನಂದಿನಿ ಉತ್ಸವವನ್ನು ಇದೇ 11 ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಕೆ.ವಿ.ರಾಜೇಂದ್ರಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಉತ್ಸವ ಒಂದು ಪ್ರತಿಭಾನೋತ್ಸವವಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮೇಯರ್ ಗಂಗಾಂಬಿಕೆ, ಶಾಸಕ ಗೋಪಾಲಯ್ಯ, ಸಾಲು ಮರದ ತಿಮ್ಮಕ್ಕ, ವಾಣಿಜ್ಯ ಮಂಡಳಿ ಅಧ್ಯಕ್ಷ ಚನ್ನೇಗೌಡ ಅವರು ನೆರವೇರಿಸಲಿದ್ದಾರೆ ಎಂದು ಹೇಳಿದರು.

ಒಂಭತ್ತು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ವಿ.ಸೋಮಣ್ಣ, ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ, ಮಾಜಿ ಸಚಿವರಾದ ಸುರೇಶ್‍ಕುಮಾರ್, ಆರ್.ಅಶೋಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಸೇರಿದಂತೆ ಚಲನಚಿತ್ರ ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಸಾಂಸ್ಕøತಿ ಕಲಾತಂಡಗಳು ಭಾಗವಹಿಸಲಿದ್ದು, ಕಾಮಿಡಿ ಎಕ್ಸ್‍ಪ್ರೆಸ್, ದಾಂಡಿಯಾ ನೃತ್ಯ, ಹಾಸ್ಯ ಕಾರ್ಯಕ್ರಮ, ದೇಹದಾಢ್ರ್ಯ ಪ್ರದರ್ಶನ, ಯಕ್ಷಗಾನ, ಹರಿಕಥೆ, ಸುಗಮಸಂಗೀತ, ಮಂಗಳೂರು ಮ್ಯೂಸಿಕಲ್ ಬ್ಯಾಂಡ್, ನಗೆ ಚಟಾಕಿ, ಮಿಸ್ ಅಂಡ್ ಮಿಸ್ಟರ್ ನಂದಿನಿ ಲೇಔಟ್, ಸ್ಪೆಷಲ್ ಕಾಮಿಡಿ, ಮಿಮಿಕ್ರಿ ಮತ್ತು ಅಂತರ್ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಇದೊಂದು ಉತ್ತಮ ವೇದಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತೆ ಅವರು ಕೋರಿದರು.
ಈ ಉತ್ಸವದಲ್ಲಿ ಸಾಹಿತ್ಯ, ಕಲೆ, ಸಾಂಸ್ಕøತಿಕ ಭಾಗದ ಎಲ್ಲ ವರ್ಗದ ಜನರನ್ನು ಒಟ್ಟುಗೂಡಿಸಿ ನಮ್ಮ ನಾಡಿನ ಸೊಗಡನ್ನು ಜನರಿಗೆ ಪ್ರದರ್ಶಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ