ಇಬ್ಬರು ಘೇಂಡಾಮೃಗ ಬೇಟೆಗಾರರು ಎನ್‍ಕೌಂಟರ್ ನಲ್ಲಿ ಬಲಿ

ಮೊರಿಗಾಂವ್, ಅ.9-ಈಶಾನ್ಯ ರಾಜ್ಯ ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಪೆÇಲೀಸರೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಘೇಂಡಾಮೃಗ ಬೇಟೆಗಾರರು ಹತರಾಗಿದ್ದಾರೆ.

ಡರ್ರಾಂಗ್ ಜಿಲ್ಲೆಗೂ ಹೊಂದಿಕೊಂಡಿರುವ ಓರಾಂಗ್ ವನ್ಯಜೀವಿ ಧಾಮದ ಬಳಿ ಸಿತಾಲ್‍ಮರಿ ಎಂಬಲ್ಲಿ ಬೇಟೆಗಾರರು ಖಡ್ಗ ಮೃಗಗಳನ್ನು ಶಿಕಾರಿ ಮಾಡಲು ಬಂದಿದ್ದಾರೆ ಎಂಬ ಖಚಿತ ಸುಳಿವು ಅಸ್ಸಾಂ ಪೆÇಲೀಸ್‍ನ ವಿಶೇಷ ಕಾರ್ಯಪಡೆ ಪೆÇಲೀಸರಿಗೆ ಲಭಿಸಿತು.

ನಿನ್ನೆ ರಾತ್ರಿಯಿಂದಲೇ ಆ ಪ್ರದೇಶದಲ್ಲಿ ಎಸ್‍ಟಿಎಫ್ ಸಿಬ್ಬಂದಿ ಶೋಧ ನಡೆಸುತ್ತಿದ್ದಾಗ 1.20ರ ನಸುಕಿನಲ್ಲಿ ಬೇಟೆಗಾರರು ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಹತರಾದರು. ಘಟನೆ ನಡೆದ ಸ್ಥಳದಿಂದ ಪಾಯಿಂಟ್ 303 ರೈಫಲ್, ಸೈಲೆನ್ಸರ್, ಒಂದು ಈಜು ಟ್ಯೂಬ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ