ಬೆಂಗಳೂರು: ನಟ ಶರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ “ವಿಕ್ಟರಿ 2” ನ “ಕುಟ್ಟು ಕುಟ್ಟು ಕುಟ್ಟಪ್ಪ” ಹಾಡು ಇದೀಗ ಸಾಮಜಿಕ ಜಾಲತಾಣ ಸೇರಿಹಲವು ಚಾಟ್ ಬಜ್ ಗಳಲ್ಲಿ ಅಗ್ರಸ್ಥಾನದಲ್ಲಿದೆ. ಶರಣ್ ಜತೆ ಅಭಿನಯಿಸಿದ ನಟಿ ಅಪೂರ್ವ ಅವರ ನೃತ್ಯ ಎಲ್ಲಾ ಚಿತ್ರಪ್ರೇಮಿಗಳ ಗಮನ ಸೆಳೆದಿದೆ. ನಾವು ಇದಾಗಲೇ ಇಂತಹಾ ಅಭಿನಯ ನೀಡಿದ ನಮ್ಮ ನಟಿಯರನ್ನು ಕಾಂಡಿದ್ದರೂ ಅಪೂರ್ವ ಈ ನಿರ್ದಿಷ್ಟ ಹಾಡಿನಲ್ಲಿ ಕಾಣಿಸಿಕೊಂಡ ರೀತಿ ನಿಜಕ್ಕೂ ವಿಭಿನ್ನವಾಗಿತ್ತು.
ನಾವು ಅಪೂರ್ವ ಅವರ ಈ ವಿಶಿಷ್ಟ ನೃತ್ಯದ ಕುರಿತು ಅವರನ್ನೇ ಕೇಳಿದಾಗ ನಾನು ನನ್ನ ಚೊಚ್ಚಲ ಚಿತ್ರ ಮಾಡಿದ ಬಳಿಕ ಕ್ರೇಜಿ ಸ್ಟಾರ್ ರವಿಚಂದ್ರನ್ ನನಗೆ ನೀನು ನಾಯಕಿಯಾಗಬೇಕಾದಲ್ಲಿ ನೃತ್ಯದ ವಿಭಿನ್ನ ಪ್ರಕಾರಗಳ ಪ್ರಯೋಗಗಳು ಕಲಿಯುವುದು ಅಗತ್ಯ ಎಂದಿದ್ದರು.ನಾನು ಮೊದಲಿನಿಂದ ನೃತ್ಯವನ್ನು ಇಷ್ಟಪಟ್ಟವಳಾಗಿದ್ದು ಅವರ ಮಾತಿನ ಬಳಿಕ ನಾನು ಮೂರು ತಿಂಗಳ ಕಾಲ ನೃತ್ಯ ತರಗತಿಗೆ ಸೇರಿದೆ. ಅಲ್ಲಿ ನಾನು ಹಲವು ಶಿಅಲಿಯ ನೃತ್ಯವನ್ನು ಅಭ್ಯಸಿಸಿದೆ. ಇದು ನನಗೆ ವಿಕ್ಟರಿಯಲ್ಲಿ ನೆರವಿಗೆ ಬಂದಿತು.” ಅವರು ಹೇಳಿದ್ದಾರೆ.
ಹರಿ ಸಂತೋಷ್ ನಿರ್ದೇಶನದ ಈ ಚಿತ್ರಕ್ಕೆ ಧನಂಜಯ್ ನೃತ್ಯ ಸಂಯೋಜನೆ ಮಾಡಿದ್ದಾರೆ.
“ಸಾಮಾನ್ಯವಾಗಿ ಹೀರೋ (ನಾಯಕ ನಟ) ಮಾತ್ರ ಇಂತಹಾ ನೃತ್ಯವನ್ನು ಪ್ರದರ್ಶಿಸುತ್ತಾರೆ.ಆದರೆ ಇಲ್ಲಿ ನನಗೆ ಈ ಅವಕಾಅ ಒದಗಿತು. ಮತ್ತು ನಾನು ಇದನ್ನು ಯಶಸ್ವಿಯಾಗಿ ಬಳಸಿಕೊಂಡಿರುವುದು ನನಗೆ ಖುಷಿ ತಂದಿದೆ.ಅಂದಹಾಗೆ ಇದು ನನ್ನ ಮೊದಲ ಪ್ರಯತ್ನವಾಗಿರುವ ಕಾರಣ ನನಗೆ ಕಾಲುನೋವು ಕಾಣಿಸಿಕೊಂಡಿತ್ತು. ಆದರೆ ಇದೆಲ್ಲದರ ಹೊರತಾಗಿ ಒಳ್ಳೆ ಚಿತ್ರತಂಡದಿಂದ ನನಗೆ ಉತ್ತಮ ಬೆಂಬಲ ಸಿಕ್ಕಿದೆ, ನನ್ನ ಆತ್ಮವಿಶ್ವಾಸ ಇಮ್ಮಡಿಯಾಗಿದೆ” ಪುನೀತ್ ರಾಜ್ ಕುಮಾರ್ ಕನಡದಲ್ಲಿನ ಒಬ್ಬ ಉತ್ತಮ ನೃತ್ಯಪಟುವಾಗಿದ್ದು ಅವರ ಪ್ರದರ್ಶನ ಶೈಯನ್ನು ನಾವು ಅನುಸರಿಸಬೇಕು” ಅಪೂರ್ವ ಹೇಳಿದ್ದಾರೆ.
September 5, 2018VDಮನರಂಜನೆComments Off on ವಿಕ್ಟರಿ-2 ಮೂಲಕ ಸ್ಯಾಂಡಲ್ ವುಡ್ ಗೆ ಬಾಲಿವುಡ್ ಗಾಯಕಿ ದಿವ್ಯ ಕುಮಾರ್ ಎಂಟ್ರಿ
Seen By: 111 ಹಿನ್ನೆಲೆ ಗಾಯಕರನ್ನು ಗುರುತಿಸಿ ಅವಕಾಶ ಕೊಡಿಸುವ ವಿಷಯದಲ್ಲಿ ಸಾಕಷ್ಟು ವಿಭಿನ್ನವಾಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಸಂಚಿಂತ್ ಹೆಗ್ಡೆ, ಮೆಹಬೂಬ್, ಅರ್ಮಾನ್ ಮಲೀಕ್ [more]
October 30, 2018VDಮನರಂಜನೆComments Off on ಕಾಲೇಜ್ ಕುಮಾರ ಚಿತ್ರದ ಯಶಸ್ಸು ವಿಕ್ಟರಿ ಸೀಕ್ವೆಲ್ ನಿರ್ದೇಶನಕ್ಕೆ ದಾರಿಯಾಯ್ತು!
Seen By: 156 ಕಾಲೇಜ್ ಕುಮಾರ್ ಚಿತ್ರದ ಯಶಸ್ಸು ವಿಕ್ಟರಿ ಸೀಕ್ವೆಲ್ ಚಿತ್ರ ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟಿತು ಎಂದು ನಿರ್ದೇಶಕ ಹರಿ ಸಂತೋಷ್ ಹೇಳಿದ್ದಾರೆ. ವಿಕ್ಟರಿ ಚಿತ್ರವನ್ನು [more]