ನವರಾತ್ರಿ ಉತ್ಸವದ ಅಂಗವಾಗಿ 10ರಿಂದ 17ರವರೆಗೆ ವಿವಿಧ ಕಾರ್ಯಕ್ರಮ

ಬೆಂಗಳೂರು,ಅ.8-ಕಪ್ಪಣ ಅಂಗಳ ನಾಡಹಬ್ಬ ನವರಾತ್ರಿ ಉತ್ಸವದ ಅಂಗವಾಗಿ ಇದೇ 10ರಿಂದ 17ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪ್ರತಿದಿನ ಸಂಜೆ 6.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, 10ರಂದು ಬುಧವಾರ ಸಂಜೆ ಹೊಸಬಗೆಯ ಹಾಸ್ಯ ಕಾರ್ಯಕ್ರಮದಲ್ಲಿ , ಹಾಸ್ಯ ಸಾಹಿತಿ ಎಚ್.ದುಂಡಿರಾಜ್ ಅವರ ಹಾಸ್ಯಪ್ರಬಂಧಗಳ ವಾಚನ ನಡೆಯಲಿದೆ.

11ರಂದು ಎ.ಎಸ್.ಮೂರ್ತಿ ವಿರಚಿತ ಟಿಪಿಕಲ್ ಆರತಿ ನಾಟಕ ಪ್ರದರ್ಶನಗೊಳ್ಳಲಿದ್ದು, 12ರಂದು ಡಾ.ಶೇಷಾದ್ರಿ ಅಯ್ಯರ್ ಹಾಗೂ ಡಾ.ಸೌಂದರ್ಯ ಅಯಗೂರು ಅವರಿಂದ ನೃತ್ಯ ಬಾನು ಕಾರ್ಯಕ್ರಮ ನೆರವೇರಲಿದೆ.
13ರಂದು ಹಿಂದೂಸ್ತಾನಿ ಗಾಯಕ ವಿದ್ವಾನ್ ಕೆ.ಮುದ್ದು ಮೋಹನ್ ಆಲಾಪ್ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 14ರಿಂದ 17ರವರೆಗೆ ಮನವರಳಿಸುವ ಚಲನಚಿತ್ರಗಳ ಉತ್ಸವದಲ್ಲಿ ಭಾರತ ಸ್ಟೋರ್ಸ್ , ಯಾರಿವ್ರು ದಯವಿಟ್ಟು ಗಮನಿಸಿ, ಮುಸ್ಸಂಜೆ, ಮಾರಿಕೊಂಡವರು, ಅಮರಾವತಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ