ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಮ್ಯಾಥ್ಯೂ ಹೇಡನ್ ಅವರು ಸರ್ಫಿಂಗ್ ಮಾಡುತ್ತಿದ್ದಾಗ ಅಪಘಾತವಾಗಿ ತಲೆಗೆ ಬಲವಾದ ಏಟು ಬಿದಿದೆ ಎಂದು ತಿಳಿದುಬಂದಿದೆ.
ಹೇಡನ್ ತಮ್ಮ ತಲೆಗೆ ಆಗಿರುವ ಗಾಯದ ಫೋಟೋಗಳನ್ನು ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ಈ ಪೋಟೋಗಳು ಇದೀಗ ವೈರಲ್ ಆಗಿವೆ.
ಅಪಘಾತದ ಬಳಿಕ ಹೇಡನ್ ಅವರನ್ನು ಕೂಡಲೇ ಸ್ಕ್ಯಾನಿಂಗ್’ಗೆ ಒಳಪಡಿಸಲಾಗಿದ್ದು, ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ರಜಾ ದಿನವಾದ್ದರಿಂದ ಕುಟುಂಬದ ಜೊತೆಗೆ ಹೇಡನ್ ಅವರು ಕ್ವೀನ್ಸ್ ಲೆಂಡ್’ಗೆ ತೆರಳಿದ್ದರು. ಸಮುದ್ರದಲ್ಲಿ ಮಗನೊಂದಿಗೆ ಸರ್ಫಿಂಗ್ ಆಡವಾಡುತ್ತಿದ್ದ ವೇಳೆ ಹೇಡನ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ.