ನವದೆಹಲಿ: ಆಂಗ್ಲರ ವಿರುದ್ಧ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲೆ ಸಿಕ್ಸ್ ಬಾರಿಸಿ ವಿಶ್ವದಾಖಲೆ ಬರೆದಿದ್ದ ರಿಷಭ್ ಪಂತ್ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಇಂಪ್ರೆಸ್ ಮಾಡಿದ್ರು ಆದ್ರೆ ವಿಕೆಟ್ ಕೀಪಿಂಗ್‍ನಲ್ಲಿ ಮಾತ್ರ ವೈಫಲ್ಯ ಅನುಭವಿಸಿದ್ದಾರೆ.
ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಹಾಗೂ ಧೋನಿಯ ಉತ್ತಾರಧಿಕಾರಿ ಎಂದೆ ಹೇಳಲಾಗುತ್ತಿದ್ದ ರಿಷಭ್ ಆಂಗ್ಲರ ವಿರುದ್ಧ ಓವೆಲ್‍ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದರು. ಇದಾದ ನಂತರ ಮೊನ್ನೆ ವಿಂಡೀಸ್ ವಿರುದ್ಧ 92 ರನ್ ಬಾರಿಸಿ ಮತ್ತೆ ಗಮನ ಸೆಳೆದಿದ್ದರು.
ಬ್ಯಾಟಿಂಗ್‍ನಲ್ಲಿ ಸೈ ಎನಿಸಿಕೊಂಡಿರುವ ರಿಷಭ್ ವಿಕೆಟ್ ಕೀಪಿಂಗ್ ವಿಷಯದಲ್ಲಿ ಮಾತ್ರ ಡಲ್ ಹೊಡೆದಿದ್ದಾರೆ.
ಆಂಗ್ಲರ ವಿರುದ್ಧ ನಾಟಿಂಗ್ಯಾಮ್‍ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಆಡಿದ್ದ ರಿಷಭ್ 6 ಬೈಸ್ ಬಿಟ್ಟಿದ್ದರು. ನಂತರ ನಾಲ್ಕನೆ ಟೆಸ್ಟ್‍ನಲ್ಲಿ 30 ಬೈಸ್, ಐದನೇ ಟೆಸ್ಟ್‍ನಲ್ಲಿ 40 ಬೈಸ್ ಬಿಟ್ಟಿದ್ದರು. ಮೊನ್ನೆ ರಾಜ್‍ಕೋಟ್ ಟೆಸ್ಟ್‍ನಲ್ಲಿ 21 ಬೈಸ್ ಬಿಟ್ಟು ಕ್ಯಾಪ್ಟನ್ ಕೊಹ್ಲಿಯ ಸಿಟ್ಟಿಗೆ ಕಾರಣರಾಗಿದ್ರು. ರಿಷಭ್ ಬರೀ ನಾಲ್ಕು ಟೆಸ್ಟ್ ಪಂದ್ಯಗಳಿಂದ ಒಟ್ಟು 97 ಬೈಸ್ ಬಿಟ್ಟಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಗಿಲ್ ಕ್ರಿಸ್ಟ್, ದೀಪ್ ದಾಸ್ ಗುಪ್ತಾ ರಿಷಭ್ ವಿಕೆಟ್ ಕೀಪಿಂಗ್‍ನಲ್ಲಿ ಇನ್ನು ಕಲಿಯಬೇಕಿದೆ ಎಂದು ಹೇಳಿದ್ದಾರೆ. ರಿಷಭ್ ಹೀಗೆ ವಿಕೆಟ್ ಕೀಪಿಂಗ್ ಮಾಡಿದ್ರೆ ತಂಡದಿಂದ ಕಿಕ್ ಔಟಾಗುವ ದಿನಗಳು ದೂರ ಏನಿಲ್ಲ.