ನವದೆಹಲಿ: ವಿದೇಶಿ ಪ್ರವಾಸದ ವೇಳೆ ಪತ್ನಿಗೂ ಜೊತೆಗೆ ಪ್ರವಾಸ ಮಾಡಲು ಅನುಮತಿ ನೀಡಬೇಕೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಕ್ಯಾಪ್ಟನ್ ಕೊಹ್ಲಿಗೆ ವಿದೇಶದಲ್ಲಿ ಆಡಲು ಹೋದಾಗ ಪತ್ನಿ ಅನುಷ್ಕಾ ಜೊತೆಯಲ್ಲಿರಬೇಕಂತೆ. ಕಳೆದ ತಿಂಗಳು ಮುಕ್ತಾಯವಾದ ಇಂಗ್ಲೆಂಡ್ ಸರಣಿಯಲ್ಲಿ ಟೂರ್ನಿ ಆರಂಭದ ಎರಡು ವಾರ ಪತ್ನಿ, ಅಥವಾ ಗರ್ಲ್ ಪ್ರೆಂಡ್ಗಳನ್ನ ಕರೆದುಕೊಂಡು ಹೋಗದಂತೆ ಸೂಚಿಸಿತ್ತು. ಇದೀಗ ನಾಯಕ ವಿರಾಟ್ ಕೊಹ್ಲಿ ಪತ್ನಿ ಜೊತೆ ವಿದೇಶಕ್ಕೆ ಕರೆದುಕೊಂಡು ಹೋಗುವ ವಿಚಾರ ಸಂಬಂಧ ನೀತಿ ನಿಯಮಗಳನ್ನ ಬದಲಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ನಾಯಕ ಕೊಹ್ಲಿಯ ಮನವಿ ಬಗ್ಗೆ ಕೂಡಲೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.