ನವದೆಹಲಿ: ಏರ್ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ನ.1 ರವರೆಗೂ ಬಂಧನಕ್ಕೊಳಪಡಿಸದಂತೆ ದೆಹಲಿ ನ್ಯಾಯಾಲಯ ಸೂಚನೆ ನೀಡಿದೆ.
ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ರಾಷ್ಟ್ರೀಯ ತನಿಖಾ ದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಮನವಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ.ಸಾಯಿನಿಯವರು ನ.1ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
ಚಿದಂಬರಂ ಅವರ ಪರ ವಕೀಲರಾದ ಪಿ.ಕೆ.ದುಬೆ ಮತ್ತು ಹರ್ಷದೀಪ್ ಸಿಂಗ್ ಅವರು ಸಲ್ಲಿಕೆ ಮಾಡಿರುವ ಅರ್ಜಿಗಳ ಮೇಲಿನ ವಾದ ಮಂಡನೆಗೆ ಮತ್ತು ವಿಸ್ತೃತ ಉತ್ತರ ಸಲ್ಲಿಕೆಗೆ ಕಾಲಾವಕಾಶ ಬೇಕೆಂದು ಸಿಬಿಐ ಹಾಗೂ ಇಡಿ ಪರವಾಗಿ ಹಾಜರಿದ್ದ ಅಡಿಶ್ನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ನಿತೀಶಾ ರಾಣ್ ಅವರು ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ವಿಚಾರಣೆಯನ್ನು ನ.1ಕ್ಕೆ ಮುಂದೂಡಲಾಗಿದೆ.






