ಬೆಂಗಳೂರು, ಅ.6- ನಾಲ್ವರು ದರೋಡೆಕೋರರ ತಂಡವೊಂದು ಮನೆಯೊಂದಕ್ಕೆ ನುಗ್ಗಿ ಕೈಕಾಲು ಕಟ್ಟಿ ಹಾಕಿ ಹಣ ಹಾಗೂ ಚಿನ್ನಾಭರಣ ದೋಚಿರುವ ಘಟನೆ ನಿನ್ನೆ ಸಂಜೆ ಸಂಜಯ್ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಜಯನಗರದ ಆರ್ಎಂವಿ 2ನೆ ಹಂತದ ಎಇಸಿಎಸ್ ಲೇಔಟ್ನ ನವೀನ್ ಎಂಬವರ ಮನೆಗೆ ನಿನ್ನೆ ಸಂಜೆ 5.45ರ ವೇಳೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದವರನ್ನು ಬೆದರಿಸಿ, ಕೈ ಕಾಲು ಕಟ್ಟಿ ಹಾಕಿ ಹಣ ಆಭರಣ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸಂಜಯ್ನಗರ ಪೆÇಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.