ರತ್ನಗಿರಿಯ ಮಾವಿಗೆ ಜಿಐ ಟ್ಯಾಗ್

ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವುಗಳ ಪೈಕಿ ಆಲ್ಫೋನ್ಸೋ ಮಾವು ಇದೀಗ ಜಿಯೋಗ್ರಾಫಿಕಲ್ ಇಂಡಿಕೇಷನ್(ಜಿಐ) ಟ್ಯಾಗ್‍ಗೆ ಪಾತ್ರವಾಗಿದೆ. ಆ ಮೂಲಕ ಜಿಐ ಟ್ಯಾಗ್ ಪಡೆದ ಭಾರತದ 325 ಉತ್ಪನ್ನಗಳ ಪೈಕಿ ಇದೂ ಒಂದಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ರತ್ನಗಿರಿ, ಸಿಂಧುದುರ್ಗ ಪ್ರದೇಶಗಳಲ್ಲಿ ವಿಶೇಷವಾಗಿ ಬೆಳೆಯುವ ಈ ಮಾವಿನ ಹಣ್ಣು ತನ್ನದೇ ಅದ ವಿಶಿಷ್ಟ ರುಚಿ, ಪರಿಮಳ ಹಾಗೂ ಬಣ್ಣವನ್ನು ಹೊಂದಿದೆ. ಹೀಗಾಗಿಯೇ ಇದು ಜಪಾನ್, ಕೊರಿಯಾ, ಯುರೋಪ್, ಅಮೆರಿಕ ಹಾಗೂ ಆಸ್ಟ್ರೇಲಿಯಾಗಳಿಗೂ ರಫ್ತಾಗುತ್ತಿದೆ.

ವಿಶೇಷ ಭೌಗೋಳಿಕ ಮೂಲ ಹಾಗೂ ಆ ಪ್ರದೇಶದಿಂದಾಗಿಯೇ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಉತ್ಪನ್ನಗಳಿಗೆ ಈ ಜಿಐ ಟ್ಯಾಗ್ ನೀಡಲಾಗುತ್ತದೆ. 2004ರಲ್ಲಿ ಭಾರತದಿಂದ ದಾರ್ಜಿಲಿಂಗ್ ಟೀ ಪ್ರಪ್ರಥಮವಾಗಿ ಜಿಐ ಟ್ಯಾಗ್ ಹೊಂದಿದ್ದು, ಇದುವರೆಗೆ ಭಾರತದ ಒಟ್ಟು 325 ಉತ್ಪನ್ನಗಳು ಜಿಐ ಟ್ಯಾಗ್ ಹೊಂದಿವೆ. ಈ ಟ್ಯಾಗ್ ಹೊಂದುವುದರಿಂದ ಗ್ರಾಮೀಣ ಆರ್ಥಿಕತೆ ವೃದ್ಧಿಸುವ ಜೊತೆಗೆ ಕೃಷಿಕರು ಕುಶಲಕರ್ಮಿಗಳ ಆದಾಯವೂ ಹೆಚ್ಚುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ