ಡಾ. ರಾಜಕುಮಾರ್ ಕುಟುಂಬದ ಒಂದೊಂದೆ ಮುತ್ತುಗಳು ಇದೀಗ ಚಿತ್ರರಂಗದಲ್ಲಿ ಪ್ರಜ್ವಲಿಸಲು ಅಣಿಯಾಗುತ್ತಿವೆ. ಇತ್ತೀಚೆಗಷ್ಟೇ ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜಕುಮಾರ್ ಅಲಿಯಾಸ್ ಗುರು ರಾಘವೇಂದ್ರ ರಾಜಕುಮಾರ್ ಸಿನಿಮಾ ರಂಗಕ್ಕೆ ಕಾಲಿಡುವುದಾಗಿ ಹೇಳಿದ್ದು ಇದೀಗ ರಾಜ್ ಕುಟುಂಬಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದೆ.
ಡಾ. ರಾಜಕುಮಾರ್ ಸಹೋದರ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎಸ್ಪಿ ವರದಪ್ಪನವರ ಮೊಮ್ಮಗ ಪೃಥ್ವಿ ವಿಜಯ್ ಕುಮಾರ್ ಇದೀಗ ಮಿಂಚುಹುಳ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಮಿಂಚುಹುಳು ಚಿತ್ರ ಮಕ್ಕಳ ಚಿತ್ರವಾಗಿದ್ದು ಈ ಚಿತ್ರವನ್ನು ಕುಮಾರ್ ಮಹೇಶ್ ಎಂಬುವರು ನಿರ್ದೇಶಿಸುತ್ತಿದ್ದಾರೆ. ಇನ್ನು ಪೃಥ್ವಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಕುಮಾರ್ ಮಹೇಶ್ ಹೇಳಿದ್ದಾರೆ.
ಈ ಚಿತ್ರದಲ್ಲಿ ಬಾಲ ಪ್ರತಿಭೆ ಪ್ರೀತಂ ಅಭಿನಯಿಸುತ್ತಿದ್ದಾರೆ. ಪ್ರೀತಂ ಇತ್ತೀಚೆಗಷ್ಟೇ ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ ವಿಜೇತರಾಗಿದ್ದರು.