ನವದೆಹಲಿ: ತೈಲ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನರಿಗೆ ಕೇಂದ್ರ ಸರ್ಕಾರ ನಿರಾಳ ನೀಡಿತ್ತು. ಆದರೆ, ತೈಲ ಕಂಪನಿಗಳು ಮಾತ್ರ ಪ್ರತೀನಿತ್ಯ ಜನರಿಗೆ ಶಾಕ್ ನೀಡುತ್ತಲೇ ಇದ್ದು, ಶನಿವಾರ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಿವೆ.
ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟಲ್ ಪೆಟ್ರೋಲ್ ಬೆಲೆ 0.18 ಪೈಸೆ ಹಾಗೂ ಡೀಸೆಲ್ ಬೆಲೆ 0.29 ಪೈಸೆಯಷ್ಟು ಏರಿಕೆ ಮಾಡಿದೆ. ಇದರಂತೆ ಪೆಟ್ರೋಲ್ ಬೆಲೆ ರೂ.81.68 ಮತ್ತು ಡೀಸೆಲ್ ಬೆಲೆ ರೂ.73.24 ಆಗಿದೆ.
ಮುಂಬೈ ನಲ್ಲಿ ಶುಕ್ರವಾರ ರೂ. 87.15 ಇದ್ದ ಪೆಟ್ರೋಲ್ ಬೆಲೆಯಲ್ಲಿ ಶನಿವಾರ 0.18 ಪೈಸೆ ಏರಿಕೆ ಮಾಡಲಾಗಿದೆ. ಆದರೆ, ಡೀಸೆಲ್ ಬೆಲೆಯಲ್ಲಿ ಮಾತ್ರ 0.70 ಪೈಸೆ ಇಳಿಕೆ ಮಾಡಲಾಗಿದ್ದು. ಇದರಂತೆ ಡೀಸೆಲ್ ಬೆಲೆ ರೂ.76.75 ಇದೆ.