ಬೆಂಗಳೂರು, ಅ.6- ಜಗತ್ತಿನ ಮುಂಚೂಣಿಯ ನೇರ ಮಾರಾಟ ಸೌಂದರ್ಯ ಬ್ರಾಂಡ್ ಆಗಿರುವ ಏವಾನ್ ತನ್ನ ನೂತನ ಪ್ರಧಾನ ವ್ಯವಸ್ಥಾಪಕರಾಗಿ ದ್ರೋಣಾಚಾರ್ಯ ಚಕ್ರಬೊರ್ತಿ ಅವರನ್ನು ನೇಮಕ ಮಾಡಿದೆ.
ವೈಯಕ್ತಿಕ ಆರೈಕೆ ಮತ್ತು ಪೆÇೀಷಕಾಂಶ ಸೇರಿದಂತೆ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ 20 ವರ್ಷಗಳ ಸಮೃದ್ಧ ಅನುಭವವನ್ನು ಹೊಂದಿರುವ ಚಕ್ರವರ್ತಿ ಅವರು ಏವಾನ್ ಇಂಡಿಯಾದ ನೂತನ ಪಾತ್ರದಲ್ಲಿ ಬೆಳವಣಿಗೆಗೆ ಚಾಲನೆ ನೀಡುವುದಲ್ಲದೆ, ಇದುವರೆಗೆ ಬಳಸಿಕೊಳ್ಳದ ಗಮನಾರ್ಹ ಸಾಮಥ್ರ್ಯ ಹೊಂದಿರುವ ಮಾರುಕಟ್ಟೆಯ ವಿಸ್ತಾರವನ್ನು ಹೆಚ್ಚಿಸಲು ನೆರವಾಗಲಿದ್ದಾರೆ.
ಏವಾನ್ ಇಂಡಿಯಾ ಸೇರಿಕೊಳ್ಳಲು ನಾನು ಬಹಳ ಉತ್ಸಾಹಿತನಾಗಿದ್ದೇನೆ. ಮಹಿಳೆಯರಿಗಾಗಿ ಕಂಪನಿಯಾದ ಏವಾನ್ ಒಂದು ಉದ್ದೇಶಕ್ಕಾಗಿ ಸೌಂದರ್ಯ ಮತ್ತು ಮಹಿಳೆಯರ ಸಬಲೀಕರಣದಲ್ಲಿ ಬದ್ಧತೆ ಹೊಂದಿದೆ. ಮಹಿಳೆಯರಿಗೆ ಸಂಬಂಧಿಸಿದ ಹಲವು ಉದ್ದೇಶಗಳಲ್ಲಿ ಜಾಗೃತಿ ಹರಡುವುದನ್ನು ಸಕ್ರಿಯವಾಗಿ ಬೆಂಬಲಿಸುವ ಕೆಲವೇ ಬ್ರಾಂಡ್ಗಳಲ್ಲಿ ಇದು ಒಂದಾಗಿದೆ. ಈ ವಿಷಯಗಳಲ್ಲಿ ಸ್ತನ ಕ್ಯಾನ್ಸರ್ ಮತ್ತು ಮಹಿಳೆಯರು ಹಾಗೂ ಬಾಲಕಿಯರ ಮೇಲೆ ಹಿಂಸೆಯನ್ನುಅಂತ್ಯಗೊಳಿಸುವ ಹೋರಾಟಗಳು ಸೇರಿವೆ.
ಪಿಎಂ ಇಂಟರ್ನ್ಯಾóಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಲ್ಲಿ ಮೇ 2018ರಿಂದ ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿದ್ದ ನಂತರ ಚಕ್ರಬೊರ್ತಿ ಅವರು ಏವಾನ್ಗೆ ಸೇರ್ಪಡೆ ಹೊಂದಿದ್ದಾರೆ. ಇದಕ್ಕೂ ಮುನ್ನ ಅವರು 12 ವರ್ಷಗಳಿಗೂ ಹೆಚ್ಚಿನ ಕಾಲ ಹರ್ಬಲ್ ಲೈಫ್ಇಂಟರ್ ನ್ಯಾóಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನೊಂದಿಗೆ ಕೆಲಸ ಮಾಡಿದ್ದು, ಸರ್ಕಾರಿ ವಿದ್ಯಮಾನಗಳ ನಿರ್ದೇಶಕರು, ಮಾರಾಟ ನಿರ್ದೇಶಕರು ಮುಂತಾದ ಹಲವು ಪಾತ್ರಗಳನ್ನು ಅವರು ವಹಿಸಿದ್ದರು. ಹರ್ಬಲ್ಲೈಫ್ನಲ್ಲಿ ಅವರು ಮಾರಾಟ ಎರಡು ಪಟ್ಟು ಬೆಳೆಯಲು ನೆರವಾಗಿದ್ದರು.