ಬೆಂಗಳೂರು, ಅ.6-ಹಾಲು ತರಲೆಂದು ಅಂಗಡಿಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು ಯಾರಿಗಾದರೂ ಮಾಹಿತಿ ಸಿಕ್ಕಿದರೆ ತಿಳಿಸುವಂತೆ ಯಶವಂತಪುರ ಪೆÇಲೀಸರು ಮನವಿ ಮಾಡಿದ್ದಾರೆ.
ಗೋಕುಲ ಬಡಾವಣೆಯ ರಂಗಸ್ವಾಮಯ್ಯ (46) ಎಂಬುವರು ನಾಪತ್ತೆಯಾಗಿದ್ದಾರೆ.
ಚಿಕಿತ್ಸೆ ಪಡೆಯಲೆಂದು ರಂಗಸ್ವಾಮಯ್ಯ ತಮ್ಮ ಅಣ್ಣನ ಮನೆಗೆ ಬಂದಿದ್ದರು. ಪ್ರತಿದಿನ ಬೆಳಗ್ಗೆ -ಸಂಜೆ ಅವರೇ ಅಂಗಡಿಯಿಂದ ಹಾಲು ತರುತ್ತಿದ್ದರು. ನಿನ್ನೆ ಸಂಜೆಯೂ ಹಾಗೆಯೇ ಅಂಗಡಿಗೆ ಹೋದವರು ವಾಪಸ್ಸಾಗಿಲ್ಲ.
ಚಹರೆ: ಸುಮಾರು 5.6 ಅಡಿ ಎತ್ತರ, ಗುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಮನೆಯಿಂದ ಹೋದಾಗ ಬಿಳಿ ಬಣ್ಣದ ಟೀಶರ್ಟ್, ಮಿಲಿಟರಿ ಬಣ್ಣದ ಮಂಡಿವರೆಗಿನ ಚಡ್ಡಿ, ನೀಲಿ-ಗುಲಾಬಿ ಬಣ್ಣದ ಚೆಕ್ಸ್ ಇರುವ ಟವೆಲ್, ಗ್ರೇ ಬಣ್ಣದ ಟೋಪಿ ಧರಿಸಿದ್ದರು. ತಲೆ ಮೇಲೆ ಹೊಲಿಗೆಯ ಗುರುತಿದೆ. ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಯಶವಂತಪುರ ಠಾಣೆ ದೂ.ಸಂ.080-22942526, 2294334ಗೆ ತಿಳಿಸುವಂತೆ ಮನವಿ ಮಾಡಲಾಗಿದೆ.