ಬೆಂಗಳೂರು, ಅ.6- ನಗರದ ಪ್ರತಿಷ್ಠಿತ 1 ಎಂಜಿ ಲಿಡೋ ಮಾಲ್, 60 ಅಡಿಯ ಉದ್ದದ ವಿಶೇಷ ಸ್ಯಾಂಡ್ವಿಚ್ ಅನ್ನು ತಯಾರಿಸಿ ಲಿಮ್ಕಾ ದಾಖಲೆ ಮಾಡಿದೆ.
ಅತ್ಯಾಕರ್ಷಕ 5ನೇ ಆವೃತ್ತಿಯ ಫಿಯೆಸ್ತಾ ಆಹಾರ ಮೇಳದಲ್ಲಿ ಈ ದಾಖಲೆ ಮಾಡಿದ್ದು, ಇದರ ತಯಾರಿಕೆಗೆ ನಾಡಿನ ಜಾನಪದ ನೃತ್ಯಗಳಾದ ಡೊಳ್ಳು ಕುಣಿತ, ಸಬ್ ಖಾದ್ಯವನ್ನು ಬಾಣಸಿಗರು ತಯಾರಿಸಿ ಉಣಬಡಿಸುತ್ತಿದ್ದರೆ ಅದಕ್ಕೆ ಸಂಗೀತದ ಹಿಮ್ಮೇಳದ ಬೆಂಗಳೂರು ವೀಕೆಂಡ್ ಅನ್ನು ಮತ್ತಷ್ಟು ಸಂಗೀತಮಯವಾಗಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಲಿಡೋ ಮಾಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮನ್ ಹಿಲರಿ, ಜನರನ್ನು ಒಟ್ಟಿಗೆ ಸೇರಿಸುವ ನಮ್ಮೊಂದಿಗೆ ಸಂತಸದಿಂದ ಕಳೆಯುವ ಕ್ಷಣಗಳನ್ನು ಗ್ರಾಹಕರಿಗೆ ಮಾಡಿಕೊಡುತ್ತೇವೆ. ಇದರೊಂದಿಗೆ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಒಟ್ಟಾಗಿ ಭಾಗವಹಿಸಿ, ಬೆಂಬಲಿಸುವ ಉದ್ದೇಶವನ್ನು ಈ ದಾಖಲೆಯ ಪ್ರಯತ್ನ ಹೊಂದಿದೆ ಎಂದು ಹೇಳಿದರು.
ಲಿಡೋ ಮಾಲ್ನ ಕೇಂದ್ರ ವ್ಯವಸ್ಥಾಪಕ ರಾಬಿ ವರ್ಗೀಸ್ ಮಾತನಾಡಿ, ಆಹಾರಪ್ರಿಯರಿಗೆ ವೈವಿಧ್ಯತೆ ಬಯಸುವ ಜನರಿಗೆ ಈ ಲಿಡೋ ಮಾಲ್ ಆಹಾರ ಮೇಳ ಅವರಿಗಿಷ್ಟವಾದ ತಿಂಡಿ ನೀಡಿ ಕರೆಸಿಕೊಳ್ಳುವ ಅದ್ಬುತ ಆಹಾರ ಅರಮನೆಯಾಗಿದೆ ಎಂದು ಹೇಳಿದರು. ಪಾಲಿಕೆ ಸದಸ್ಯೆ ಮಮತಾ ಸರವಣ, ಮಾಜಿ ಸದಸ್ಯ ಸರವಣ ಮತ್ತಿತರ ಗಣ್ಯರು ಹಾಜರಿದ್ದರು.