ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರ “ಜಂಟಲ್ ಮ್ಯಾನ್” ಗಾಗಿ ಇದಾಗಲೇ ಸಾಕಷ್ಟು ತಯಾರಿಗಳನ್ನು ನಡೆಸಿರುವ ಚಿತ್ರತಂಡ ಇದೇ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭಿಸಲು ಯೋಜಿಸಿದೆ. ಆದರೆ ಚಿತ್ರದ ನಾಯಕಿ ಯಾರೆನ್ನುವುದು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಪ್ರಜ್ವಲ್ ಗೆ ಜತೆಯಾಗಿ ಅಭಿನಯಿಸಲು ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕು ಎನ್ನುತ್ತಿದೆ ಚಿತ್ರತಂಡ ಇದೆಲ್ಲದರ ನಡುವೆ ಬಲ್ಲ ಮೂಲಗಳಿಂದ ತಿಳಿದುಬಂದ ವಿಚಾರವೇನೆಂದರೆ ನಂದಿತಾ ಶ್ವೇತಾ “ಜಂಟಲ್ ಮ್ಯಾನ್ ಗೆ ಜತೆಗಾತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿದ್ರಾರೋಗ (ಸ್ಲೀಪಿಂಗ್ ಡಿಸಾರ್ಡರ್) ನಿಂದ ಬಳಲುತ್ತಿರುವ ನಾಯಕನು ಚಿಕಿತ್ಸೆಗಾಗಿ ಮನೋವೈದ್ಯರಲ್ಲಿ ತೆರಳುವ ಸಮಯದಲ್ಲಿ ನಾಯಕಿ ಶ್ವೇತಾ ವೈದ್ಯಳ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಚಿತ್ರತಂಡ ಚಿತ್ರದ ಕಥೆಯ ಬಗೆಗೆ ನೀಡಿದ ಸುಳಿವೊಂದರಲ್ಲಿ ಹೇಳಿದೆ.
ನಮಗೆ ಸಿಕ್ಕಿರುವ ಮಾಹಿತಿಯಂತೆ ಶ್ವೇತಾ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದು ಅವರ ಬೇರೆ ಚಿತ್ರಗಳ ಚಿತ್ರೀಕರಣಕ್ಕೆ ತೊಂದರೆಯಾಗದ ರೀತಿಯಲ್ಲಿ ಶೂಟಿಂಗ್ ಗೆ ದಿನನಿಗದಿ ಮಾಡಿಕೊಳ್ಳಲಿದ್ದಾರೆ.
ತಮಿಳು, ತೆಲುಗು ಚಿತ್ರಗಳಲ್ಲಿ ಸಾಕಶ್ಃತು ಹೆಸರು ಗಳಿಸಿಕೊಂಡಿರುವ ಶ್ವೇತಾ ಪ್ರಭುದೇವ ಅವರ “ದೇವಿ 2 ” ಸೇರಿ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಮೈ ನೇಮ್ ಈಸ್ ಕಿರಾತಕ” ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರಲು ಸಹ ಸಿದ್ದವಿದ್ದಾರೆ.
ಜದೇಶ್ ಕುಮಾರ್ ನಿರ್ದೇಶನ, ಗುರು ದೇಅಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಜಂತಲ್ ಮ್ಯಾನ್”ದೇಶಪಾಂಡೆ ಪಾಲಿಗೆ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ ಎನ್ನುವುದು ಗಮನಾರ್ಹ ಸಂಗತಿ.