ಭಾರತದ ವಿದೇಶಿ ವಿನಿಮಯ ಮೀಸಲು 1.3 ಬಿಲಿಯನ್ ಡಾಲರ್ ನಷ್ಟು ಕುಸಿತ!

ನವದೆಹಲಿ: ಭಾರತದ ವಿದೇಶಿ ವಿನಿಮಯ ಮೀಸಲು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ 1.26 ಬಿಲಿಯನ್ ಡಾಲರ್ ಕುಸಿತ ಕಂಡಿದೆ.
ಆರ್ ಬಿಐ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಒಟ್ಟಾರೆ ವಿದೇಶಿ ವಿನಿಮಯ ಮೀಸಲು 401.79 ಬಿಲಿಯನ್ ಡಾಲರ್ ನಿಂದ $400.52 ಬಿಲಿಯನ್ ಗೆ ಕುಸಿದಿದೆ. ಫಾರಿನ್ ಕರೆನ್ಸಿ ಅಸೆಟ್ಸ್(ಎಫ್ ಸಿಎ) ಚಿನ್ನದ ಮೀಸಲು, ವಿಶೇಷ ಹಿಂತೆಗೆತ ಅಧಿಕಾರ (ಎಸ್ ಡಿ ಆರ್ ) ಹಾಗೂ ಐಎಂಎಫ್ ನಲ್ಲಿ ಆರ್ ಬಿಐ ನ ಸ್ಥಿತಿ ಎಲ್ಲವೂ ವಿದೇಶಿ ವಿನಿಮಯವನ್ನು ನಿರ್ಧರಿಸುವ ಅಂಶಗಳಾಗಿವೆ.
ಇನ್ನು ಇದೇ ವೇಳೆ ದೇಶದ ಚಿನ್ನದ ಮೀಸಲು ಸಹ ಇಳಿಕೆಯಾಗಿದ್ದು, 70.7 ಮಿಲಿಯನ್ ಡಾಲರ್ ಇಳಿಕೆಯಾಗಿದ್ದು, 20.34 ಬಿಲಿಯನ್ ಡಾಲರ್ ಗೆ ಕುಸಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ