ಮೊಬೈಲ್ ಖರೀದಿಸಲು ಬಯಸುವ ಗ್ರಾಹಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ ನೋಡಿ. ಅದೇನೆಂದರೆ ಬರುವ ಹಬ್ಬಗಳ ಪ್ರಯುಕ್ತ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಆರಂಭಿಸಲಿದೆ.
ಫ್ಲಿಪ್ಕಾರ್ಟ್ ಅಕ್ಟೋಬರ್ 11 ರಿಂದ ನಾಲ್ಕ ದಿನಗಳ ಕಾಲ ನಡೆಯಲಿರುವ ಬಿಗ್ ಡೇಗೆ ಈಗಾಗಲೇ ಭಾರಿ ರಿಯಾಯಿತಿ ಘೋಷಿಸಿದೆ.
ಶೇ. 62 ರವರೆಗೆ ಡಿಸ್ಕೌಂಟ್
ಮೊಬೈಲ್ ಸಂಸ್ಥೆಗಳು ಸರಾಸರಿ ಶೇ. 62 ರವರೆಗೆ ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದ್ದು, ಸ್ಮಾರ್ಟ್ ಫೋನ್ಗಳ ಮಾರಾಟದ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಶೇ. 100 ರಷ್ಟು ಹೆಚ್ಚಾಗುವುದಾಗಿ ಫ್ಲಿಪ್ಕಾರ್ಟ್ ಹೇಳಿಕೊಂಡಿದೆ.
ಸ್ಯಾಮ್ಸಂಗ್ ರಿಯಾಯಿತಿ .
ಬಿಗ್ ಬಿಲಿಯನ್ ಡೇ ಮಾರಾಟದ ಅಂಗವಾಗಿ ಈಗಾಗಲೇ ಸ್ಯಾಮ್ಸಂಗ್ ತನ್ನ ರೂ. 49 ಸಾವಿರ ದರದ ಗ್ಯಾಲಕ್ಸಿ ಎಸ್ 8 ಮೇಲೆ ರೂ. 20 ಸಾವಿರ ರಿಯಾಯಿತಿ ಘೋಷಿಸಿದೆ. ಇದೇ ರೀತಿ ಹಲವಾರು ಕಂಪನಿಗಳು ಶೇ. 20-50ರಷ್ಟು ರಿಯಾಯಿತಿಯನ್ನು ಘೋಷಿಸುವ ಸಾಧ್ಯತೆ ಇದೆ.
ಫ್ಲಿಪ್ಕಾರ್ಟ್ ಹೇಳಿಕೆ
ಕಡಿಮೆ ಬೆಲೆಗೆ ಅತಿಹೆಚ್ಚು ತಂತ್ರಜ್ಞಾನದ ಮೊಬೈಲ್ ಕೊಳ್ಳಲು ಹೆಚ್ಚಿನ ಗ್ರಾಹಕರು ಇಷ್ಟಪಡುತ್ತಾರೆ ಎನ್ನುವುದು ಬಿಗ್ಬಿಲಿಯನ್ ಡೇ ಸಂದರ್ಭದಲ್ಲಿ ಸ್ಪಷ್ಟವಾಗಲಿದೆ ಎಂದು ಫ್ಲಿಪ್ಕಾರ್ಟ್ ನ ಹಿರಿಯ ನಿರ್ದೇಶಕ ಅಯ್ಯಪ್ಪನ್ ತಿಳಿಸಿದ್ದಾರೆ.