ಬೆಂಗಳೂರು, ಅ.6- ಯಶವಂತಪುರ ರೈಲ್ವೆ ನಿಲ್ದಾಣದ ಫ್ಲಾಟ್‍ಫಾರಂ 3ರಲ್ಲಿ 65 ವರ್ಷದ ಅಪರಿಚಿತ ವೃದ್ದೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ.
ಮೃತರ ವಾರಸುದಾರರು ಯಾರಾದರೂ ಇದ್ದರೆ ಕೂಡಲೇ ಯಶವಂತಪುರ ರೈಲ್ವೆ ಪೆÇಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
5.5 ಅಡಿ ಎತ್ತರ, ಕೋಲು ಮುಖ, ಅಗಲವಾದ ಹಣೆ ಹೊಂದಿದ್ದಾರೆ. ಕತ್ತಿನಲ್ಲಿ ಹವಳದಿಂದ ಕೂಡಿದ ಕಪ್ಪುಕರಿಮಣಿ ಇದ್ದು, ಗುಲಾಬಿ ಬಣ್ಣದ ಜಾಕೆಟ್ ತೊಟ್ಟಿದ್ದಾರೆ. ಎಡಗೈಯಲ್ಲಿ ಕಪ್ಪು ಬಣ್ಣದ ಮಚ್ಚ ಇದೆ. ಕೂಲಿ ಕಾರ್ಮಿಕರು ಧರಿಸುವ ವಸ್ತ್ರ ಧರಿಸಿದ್ದಾರೆ. ಅವರು ನಿನ್ನೆ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ.
ವಾರಸುದಾರರು ತಕ್ಷನ 080-23376404 ಅಥವಾ 94480802118 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಯಶವಂತಪುರ ರೈಲ್ವೆ ನಿಲ್ದಾಣದ ಪ್ರಕಟಣೆ ತಿಳಿಸಿದೆ.