ಬೆಂಗಳೂರು,ಅ.6- ಬರವಣಿಗೆ ಹಲವರ ಹವ್ಯಾಸವಾದರೆ ಅದನ್ನು ವಿಶಿಷ್ಟ ಶೈಲಿಯಲ್ಲಿ ಬರೆಯುವುದು ಮತ್ತೆ ಕೆಲವರ ಹವ್ಯಾಸ. ಇಂತಹ ವಿಭಿನ್ನ ಹವ್ಯಾಸದೊಂದಿಗೆ ಕನ್ನಡದ ಖ್ಯಾತ ಕವಿ ಟಿಬಿಜೆ ಅವರ ಮಂಕುತಿಮ್ಮನ ಕಗ್ಗವನ್ನು ವೃತ್ತಿಯಲ್ಲಿ ಆಟೋ ಚಾಲಕರಾದ ಜಗನ್ನಾಥ್ ಅತಿ ಸಣ್ಣ ಪುಸ್ತಕದಲ್ಲಿ ಒಡಮೂಡಿಸಿದ್ದಾರೆ.
ಏನಿದು ಎಂದು ಅಚ್ಚರಿಯಾಗಬಹುದು. ಆದರೆ ಡಿವಿಜಿ ಅವರ ಮಂಕು ತಿಮ್ಮನ ಕಗ್ಗವನ್ನು ಕೇವಲ 2 ಸೆಂ. ಮೀ ಅಗಲದ ಅತಿ ಚಿಕ್ಕ ಪುಸ್ತಕದಲ್ಲಿ ಪೆನ್ಸಿನಲ್ನಲ್ಲಿ ಅದನ್ನು ಬರೆದಿದ್ದಾರೆ. ಇಂತಹ ಸೂಕ್ಷ್ಮ ಪುಸ್ತಕ ರಚನಗೆ ಅವರು ತೆಗೆದುಕೊಂಡಿರುವುದು ಒಂದೆರಡು ದಿನಗಳಲ್ಲ. ಬರೋಬ್ಬರಿ ಒಂದು ವರ್ಷ.
ಡಿವಿಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಇಂದು ಅದನ್ನು ಲೋಕಾರ್ಪಣೆ ಗೊಳಿಸಿರುವ ಅವರು, ಇದೇ ಮಾದರಿಯಲ್ಲಿ ತಮ್ಮ ಹವ್ಯಾಸವನ್ನು ಬೆಳೆಸಿಕೊಂಡಿದ್ದು, ಅತಿ ಚಿಕ್ಕದಾಗಿ ವಿಷಯವನ್ನು ಒಂದೇ ಹಾಳೆಯಲ್ಲಿ ಚಿಕ್ಕ ಪುಸ್ತಕದಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ಅದರಂತೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಒಂದೇ ಪುಟದಲ್ಲಿ ಮಿಳಿತಗೊಳಿಸಿದ್ದು ಆ ಪುಟದ ವಿಸ್ತೀರ್ಣ ನೋಡಿದರೆ ಇವರ ಕೌಶಲ್ಯತೆ ಬೆರಗು ಮೂಡಿಸುತ್ತಿದೆ.
ಕೇವಲ 40 ಇಂಚು ಅಗಲದ, 30 ಇಂಚು ಉದ್ದದ ಹಾಳೆಯಲ್ಲಿ ಇಡೀ ಕಗ್ಗವನ್ನು ಕಟ್ಟಿಕೊಟ್ಟಿದ್ದಾರೆ. ಇದೇ ರೀತಿ ಎ4 ಹಾಳೆಯಲ್ಲಿ ಶ್ರೀಮದ್ಭಗವದ್ಗೀತಾವನ್ನು ಮೂರು ತಿಂಗಳ ಅವಧಿಯಲ್ಲಿ ರಚಿಸಿದ್ದರೆ ಭಗವದ್ಗೀತೆಯ ಕಿರ ಪುಸ್ತಕವನ್ನು 9 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ. ಈ ಪುಸ್ತಕದ ವಿಸ್ತೀರ್ಣ 2 ಸೆ.ಮಿ ಅಗಲ, 1 ಸೆ.ಮೀ ಉದ್ದವಿದ್ದು, ಕೇವಲ 1 ಸೆಂ.ಮೀ ದಪ್ಪ ಇರುವ ಇದು 81 ಪುಟಗಳನ್ನು ಒಳಗೊಂಡಿದೆ.
ಕನ್ನಡದ ಕಂಪನ್ನು ಪುಟ್ಟ ಪುಸ್ತಕಗಳಲ್ಲಿ ಮೂಡುವಂತೆ ಮಾಡಿರುವ ಜಗದೀಶ್ ಹಿಂದಿ ಬರವಣಿಗೆಯಲ್ಲಿ ಹಿಂದೆ ಬಿದ್ದಿಲ್ಲ. ಭಗವದ್ಗೀತೆಯನ್ನು ಹಿಂದಿಯಲ್ಲಿ ಕಿರುಪುಸ್ತಕ ರಚಿಸಿದ್ದು ಅದು ಸುಮಾರು 96 ಪುಟಗಳನ್ನು ಒಳಗೊಂಡಿದೆ.
ಈ ಪುಸ್ತಕವು ಸಹ ಕೇವಲ 2 ಸೆ.ಮೀ ಅಗಲ, 1.5 ಸೆ.ಮೀ ಉದ್ದ , 1 ಸೆ.ಮೀ ದಪ್ಪ ಇದ್ದು ಇಂಥ ವಿಶಿಷ್ಟ ಬರವಣಿಗೆಯ ನಿಪುಣತೆಯನ್ನು ಜಗದೀಶ್ ಅಳವಡಿಸಿಕೊಂಡಿದ್ದಾರೆ. ನಾಳೆ ಡಿವಿಜಿ ಅವರ ಪುಣ್ಯತಿಥಿ ಇರುವ ಹಿನ್ನೆಲೆಯಲ್ಲಿ ಇದನ್ನು ಲೋಕಾರ್ಪಣೆಗೊಳಿಸಿದ್ದಾರೆ.