ರಾಜ್ಕೋಟ್ : ಟೀಂ ಇಂಡಿಯಾದ ಕೇರಂ ಸ್ಪೆಶಲಿಸ್ಟ್ ಆರ್.ಅಶ್ವಿನ್ ದಕ್ಷಿಣ ಆಫ್ರಿಕಾದ ವೇಗಿ ಅಲನ್ ಡೋನಾಲ್ಡ್ ಅವರನ್ನ ಹಿಂದಿಕ್ಕಿದ್ದಾರೆ.
ವಿಂಡೀಸ್ ವಿರುದ್ಧ ಆಫ್ ಸ್ಪಿನ್ನರ್ ಆರ್.ಅಶ್ವಿನ್ 6 ವಿಕೆಟ್ಗಳನ್ನ ಪಡೆಯುವ ಮೂಲಕ ಹೊಸ ದಾಖಲೆ ಬರೆದರು. ಅಶ್ವಿನ್ ಇದೀಗ 63 ಟೆಸ್ಟ್ ಪಂದ್ಯಗಳಿಂದ 118 ಇನ್ನಿಂಗ್ಸ್ಗಳಿಂದ 333 ವಿಕೆಟ್ಗಳನ್ನ ಪಡೆದಿದ್ದಾರೆ. ಇನ್ನು ಅಲನ್ ಡೋನಾಲ್ಡ್ 72 ಪಂದ್ಯಗಳಿಂದ 129 ಇನ್ನಿಂಗ್ಸ್ಗಳಿಂದ 330 ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಭಾರತೀಯ ಬೌಲರ್ಗಳ ಸಾಲಿನಲ್ಲಿ ಆರ್. ಅಶ್ವಿನ್ ನಾಲ್ಕನೆ ಸ್ಥಾನದಲ್ಲಿ ನಿಲ್ಲುತ್ತಾರೆ. ಅನಿಲ್ ಕುಂಬ್ಳೆ 619, ಕಪಿಲ್ ದೇವ್ 434, ಹರ್ಭಜನ್ ಸಿಂಗ್ 417 ವಿಕೆಟ್ ಪಡೆದಿದ್ದಾರೆ.