
ಬೆಳಗಾವಿ: ಖಾನಾಪುರ ಎಸಿಎಫ್ ಚಂದ್ರಗೌಡ ಪಾಟೀಲ ಮನೆ ಮೇಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಎಸಿಎಫ್ ಚಂದ್ರಗೌಡ ಪಾಟೀಲ ಅವರ ರಾಮತೀರ್ಥ ನಗರದ ನಿವಾಸ, ಬೈಲಹೊಂಗಲದ ನಿವಾಸ ಹಾಗೂ ಖಾನಾಪುರ ಕಚೇರಿ ಮೇಲೆ ಏಕಕಾಲದಲ್ಲಿ ಮೂರು ತಂಡಗಳು ದಾಳಿ ನಡೆಸಿವೆ. ಈ ವೇಳೆ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇರೆಗೆ ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.