ಬೆಂಗಳೂರು: ಶಾಹುರಾಜ್ ಶಿಂಧೆ ನಿರ್ದೇಶನದ “ರಂಗ ಮಂದಿರ” ಚಿತ್ರಕ್ಕೆ “ಚೂರಿ ಕಟ್ಟೆ” ಖ್ಯಾತಿಯ ನಿರ್ಮಾಪಕ ಪ್ರವೀಣ್ , ನಟ ಆಶು ಬೆದ್ರೆ, ಅನುಪಮಾ ಗೌಡ ಹಾಗು ಶ್ರುತಿ ಪ್ರಕಾಶ್ ಬಂಡವಾಳ ಹೂಡಿದ್ದಾರೆ.
ಇನ್ನು ಚಿತ್ರದ ನಾಯಕಿಯನ್ನಾಗಿ ಆಶಿಕಾ ರಂಗನಾಥ್ ಅವರನ್ನು ಚಿತ್ರತಂಡ ಅಂತಿಮಗೊಳಿಸಿದೆ. “ರ್ಯಾಂಬೋ 2” ನಾಯಕಿಯಾದ ಆಶಿಕಾ ತಾವು ಮುಂದಿನ ಹಂತದ ಚಿತ್ರೀಕರಣದ ವೇಳೆ ಶೂಟಿಂಗ್ ನಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಇನ್ನು ಈ ಚಿತ್ರ ನಿರ್ದೇಶಕ ಶಿಂದೆ ಪಾಲಿಗೆ ಸ್ಯಾಂಡಲ್ ವುಡ್ ಗೆ ಪುನರಾಗಮನದ ಚಿತ್ರವಾಗಿದೆ. ಎಂಟು ವರ್ಷಗಳ ದೀರ್ಘಾವಧಿ ಬಳಿಕ ಅವರು ಮತ್ತೆ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ.
ಚಿತ್ರದ ಪ್ರಸಕ್ತ ಸುತ್ತಿನ ಚಿತ್ರೀಕರಣವನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಂಗಯಣ ರಘು, ತೆಲುಗು ನಟ ಸುಮನ್, ಅಚ್ಯುತ್ ಕುಮಾರ್ ಸಹ ಈ ಚಿತ್ರದ ಪ್ರಮುಖ ತಾರಾಂಗಣದಲ್ಲಿದ್ದಾರೆ.