ರಾಯಚೂರು: ನಿಗೂಢರೋಗದಿಂದಾಗಿ ಹಲವಾರು ಕುರಿಗಳು ಸಾವನ್ನಪ್ಪುತ್ತಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಬಗಡಿ ತಾಂಡಾದಲ್ಲಿ
ನಡೆದಿದೆ.
ಪ್ರತಿದಿನ 10 ಕುರಿಗಳು ವಿಚಿತ್ರ ಕಾಯಿಲೆಗೆ ಬಲಿಯಾಗುತ್ತಿವೆ. ಬರಗಾಲದ ನಾಡಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ಬುಡಕಟ್ಟು ಜನಾಂಗ ಈಗ ಕುರಿಗಳ ಸಾವಿನಿಂದ ಕಂಗಾಲಾಗಿದೆ.
ಪಶುಸಂಗೋಪನ ಸಚಿವ ವೆಂಕಟರಾವ್ ನಾಡಗೌಡ ಅವರ ತವರು ಜಿಲ್ಲೆಯಲ್ಲಿಯೇ ಕುರಿಗಳ ಸರಣಿ ಸಾವು ಸಂಭವಿಸುತ್ತಿದ್ದು, ಬಡವರ ನಿದ್ದೆಗೆಡಿಸಿದೆ ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮದ ಜೊತೆಗೆ ಪರಿಹಾರ ದನ ನೀಡಲು ಬಗಡಿತಾಂಡಾದ ಲಕ್ಷಿಮಿಬಾಯಿ ಹನುಮಂತಪ್ಪ ರಾಠೋಡ ವಿನಂತಿಸಿದ್ದಾರೆ.