ರಾಜ್‍ಕೋಟ್: ಸೊಗಸಾದ ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 272 ರನ್ ಅಂತರದಿಂದ ಭಾರೀ ದೊಡ್ಡ ಗೆಲುವು ದಾಖಲಿಸಿತು.
ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಂ ಇಂಡಿಯಾ ಅತಿ ದೊಡ್ಡ ಗೆಲುವನ್ನ ಕಂಡಿದೆ. ಮೂರನೇ ದಿನದಾಟದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‍ಗಳಲ್ಲಿ 48 ಓವರ್‍ಗಳಲ್ಲಿ 181 ರನ್‍ಗಳಿಗೆ ಆಲೌಟ್ ಆಯಿತು.
ಫಾಲೋ ಆನ್ ಪಡೆದ ಬ್ರಾಥ್‍ವೈಟ್ ಪಡೆ ಎರಡನೇ ಇನ್ನಿಂಗ್ಸ್‍ನಲ್ಲಿ ರವೀಂದ್ರ ಜಡೇಜಾ (3), ಕುಲ್‍ದೀಪ್ ಯಾದವ್ (5) ದಾಳಿಗೆ ತತ್ತರಿಸಿ 196 ರನ್‍ಗಳಿಗೆ ಆಲೌಟ್ ಆಯಿತು. ಕೊಹ್ಲಿ ಪಡೆ ಮೂರನೇ ದಿನದಾಟದ ಪಂದ್ಯದಲ್ಲೆ ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.