
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಎಸ್ ಆರ್ ಕೆ ಸಿನಿಮಾವನ್ನು ಲಕ್ಕಿ ಗೋಪಾಲ್ ನಿರ್ದೇಶಿಸುತ್ತಿದ್ದಾರೆ, ಕನ್ನಡದಲ್ಲಿ ಮೊದಲ ಬಾರಿಗೆ ತೆಲುಗು ನಟಿ ಈಶಾ ರೆಬ್ಬಾ ಅಭಿನಯಸುತ್ತಿದ್ದಾರೆ.
ಎಸ್ ಆರ್ ಕೆ ಸಿನಿಮಾದಲ್ಲಿ ಉಪನ್ಯಾಸಕಿ ಪಾತ್ರದಲ್ಲಿ ಈಶಾ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ, ಮೊದಲ ಬಾರಿಗೆ ನಿರ್ಮಾಪಕನಾಗಿ ಕಿರಣ್ ಕುಮಾರ್ ಪಾದಾರ್ಪಣೆ ಮಾಡುತ್ತಿದ್ದಾರೆ, ಅಜನೀಶ್ ಬಿ ಲೋಕನಾಥ್, ಸಂಗೀತ ನೀಡುತ್ತಿದ್ದು ಮುಫ್ತಿ ಖ್ಯಾತಿಯ ಸಿನಿಮಾಟೋಗ್ರಾಫರ್ ನವೀನ್ ಕುಮಾರ್ ಜೊತೆಗಿದ್ದಾರೆ,
ಅಂತಕ ಮೊಂಡು ಆ ತಾರ್ವತಾ ತೆಲುಗು ಸಿನಿಮಾದಲ್ಲಿ ಈಶಾ ರೆಬ್ಬಾ ಮೊದಲ ಬಾರಿಗೆ ನಟಿಸಿದ್ದರು, ಅನಂತರ ಬಂಡಿಪೊಟು, ಓಯಾ, ಆಮಿ ತುಮಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.