ನವದೆಹಲಿ: ಎರಡು ದಿನಗಳ ಪ್ರವಾಸದ ನಿಮಿತ್ತ ಭಾರತಕ್ಕೆ ಬಂದಿಳಿದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ಪ್ರವಾಸದ ಮೊದಲ ದಿನವಾದ ಇಂದು ಮಹತ್ವದ ಒಪ್ಪಂದಕ್ಕೆ ಅಂಕಿತ ಬೀಳಲಿದೆ.
ಎಸ್-400 ವಾಯು ರಕ್ಷಣಾ ವ್ಯವಸ್ಥೆಗೆ ಎರಡೂ ದೇಶದ ನಾಯಕರು ಸಹಿ ಹಾಕಲಿದ್ದಾರೆ. ಈ ವ್ಯವಸ್ಥೆಯನ್ನು ಈ ಮೊದಲು ಜಗತ್ತಿನ ದೊಡ್ಡಣ್ಣ ಅಮೆರಿಕ ತೀವ್ರವಾಗಿ ವಿರೋಧಿಸಿತ್ತು. ಭಾರತದ ನೆರೆಯ ರಾಷ್ಟ್ರ ಚೀನಾ ಸಹ ಈ ಭೇಟಿಯನ್ನು ಬೆರಗು ಕಣ್ಣುಗಳಿಂದ ಗಮನಿಸುತ್ತಿದೆ.
ರಕ್ಷಣಾ ಒಪ್ಪಂದದ ಹೊರತಾಗಿ ಪುಟಿನ್ ಹಾಗೂ ಮೋದಿ ಎರಡನೇ ರಷ್ಯಾ ನಿರ್ಮಿತ ನ್ಯೂಕ್ಲಿಯರ್ ಪವರ್ ಪಾಯಿಂಟ್ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. 2022ರ ಮಾನವ ಸಹಿತ ಬಾಹ್ಯಾಕಾಶ ಯಾನದ ಕುರಿತಂತೆಯೂ ಮಾತುಕತೆ ಜರುಗಲಿದೆ.