‘ಕಾನೂರಿನ ತೋಳಗಳು’ ಚಿತ್ರದ ಮೂಲಕ ತೆರೆಯ ಮೇಲೆ ಬರಲಿದೆ ಕರ್ನಾಟಕ ಪಾಲಿಟಿಕ್ಸ್!

ಬೆಂಗಳೂರು:  ಕರ್ನಾಟಕ ರಾಜಕೀಯದ ಹೈಡ್ರಾಮಾದ ಜೊತೆಗೆ ಥ್ರಿಲ್ಲರ್ ಕಥೆಯೊಂದನ್ನು ಕಾಂಗ್ರೆಸ್ ಯುವ ಮುಖಂಡರೊಬ್ಬರು ಬೆಳ್ಳಿತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ.
ಸಿನಿಮಾದಲ್ಲಿ ಎಲ್ಲಾ ರೀತಿಯ ಆಕಾಂಕ್ಷೆ, ಅಭಿಲಾಷೆ.  ಹೊಟ್ಟೆಕಿಚ್ಚು, ಒಳಸಂಚು, ಸೇಡಿನ ರಾಜಕೀಯ ಜೊತೆ ರಾಜಕೀಯ ಹಾಗೂ ರಾಜಕಾರಣಿಗಳನ್ನು ಚಿತ್ರದ ಕಥೆ ಒಳಗೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಧರ್ಮಸೇನ ಹೇಳಿದ್ದಾರೆ.
ಮೊದಲ ಬಾರಿಗೆ ಚಿತ್ರ ನಿರ್ದೇಶಿಸುತ್ತಿರುವ ಧರ್ಮಸೇನ್,ಸಿನಿಮಾದ ಚಿತ್ರಕಥೆ ಹಾಗೂ ನಿರ್ದೇಶನ  ಹಾಗೂ ಸಂಗೀತ ನೀಡಿದ್ದಾರೆ.
1980ರ ಮಧ್ಯದಲ್ಲಿ ತುಮಕೂರಿನಲ್ಲಿ ನಡೆದ
ಹೆಣ್ಣಮಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕಥೆ ಇದಾಗಿದೆ, ಕೆಲವರು ಇದು ಮಾಂತ್ರಿಕನ ಕೆಲಸ ಎಂದರೇ ಮತ್ತೆ ಕೆಲವರು ತೋಳದ ದಾಳಿ ಎಂದು ಹೇಳಿದ್ದಾರೆ, ಆದರೆ ಈ ಬಾಲಕಿಯ ನಿಗೂಡ ಸಾವು ಇನ್ನೂ ರಹಸ್ಯವಾಗಿಯೇ ಉಳಿದಿದೆ,
ರಾಜಕೀಯ ಡ್ರಾಮ ಹಾಗೂ ಪೊಲೀಸ್ ಅಧಿಕಾರಿಯ ತನಿಖೆ ಕಥೆಯ ಮುಖ್ಯ ಭಾಗವಾಗಿದೆ, ವಿರೋಧ ಪಕ್ಷದ ರಾಜಕಾರಣಿಗಳು ಈ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸುಕೊಳ್ಳುವ ರೀತಿ, ಪ್ರೇಕ್ಷಕರಿಗೆ ನಿಜವಾದ ಥ್ರಿಲ್ಲರ್ ನೀಡಲಿದೆ ಎಂದು ಹೇಳಿದ ಧರ್ಮಸೇನ್ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ,
ಚಿತ್ರಕ್ಕೆ ಇನ್ನೂ ಕಲಾವಿದರ ಫೈನಲ್ ಆಗಿಲ್ಲ,  ಅಕ್ಟೋಬರ್ 2ನೇ ವಾರದಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ,  ಶಿವಮೊಗ್ಗದ ಮಲೆನಾಡಿ ಕಾನೂರಿನಲ್ಲಿ ಚಿತ್ರೀಕರಣ ನಡೆಯಲಿದೆ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ