ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ಕ್ವೀನ್ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಚಿತ್ರ ನಿರ್ಮಾಪಕರು ನಾಲ್ಕು ಭಾಷೆಗಳಲ್ಲಿ ಕೂಡ ಚಿತ್ರದ ಮೊದಲ ಪೋಸ್ಟರ್ ನ್ನು ಅಕ್ಟೋಬರ್ 19ರಂದು ಬಿಡುಗಡೆ ಮಾಡಲು ಯೋಜಿಸುತ್ತಿದೆ.
ಬಟರ್ ಫ್ಲೈ ಎಂದು ಕನ್ನಡದಲ್ಲಿ ತಯಾರಾಗುತ್ತಿದ್ದ ಚಿತ್ರದಲ್ಲಿ ಪಾರುಲ್ ಯಾದವ್, ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ನಲ್ಲಿ ಕಾಜಲ್ ಅಗರ್ ವಾಲ್ ಎಂದು ತಯಾರಾಗುತ್ತಿದೆ. ಈ ಎರಡೂ ಭಾಷೆಗಳನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ. ತೆಲುಗಿನಲ್ಲಿ ಮಹಾಲಕ್ಷ್ಮಿ ಎಂಬ ಹೆಸರಿನಲ್ಲಿ ತಯಾರಾಗುತ್ತಿದ್ದು ಪ್ರಶಾಂತ್ ವರ್ಮ ನಿರ್ದೇಶಿಸುತ್ತಿದ್ದಾರೆ. ತಮನ್ನಾ ಭಾಟಿಯಾ ನಾಯಕಿ. ಇನ್ನು ಮಲಯಾಳಂನಲ್ಲಿ ಝಮ್ ಝಮ್ ಚಿತ್ರವನ್ನು ನೀಲಕಂಠ ನಿರ್ದೇಶಿಸುತ್ತಿದ್ದು ಮಂಜಿಮಾ ಮೋಹನ್ ನಾಯಕಿಯಾಗಿದ್ದಾರೆ.
ಇದೀಗ ಎಲ್ಲಾ ನಾಲ್ಕು ಭಾಷೆಗಳಲ್ಲಿನ ಚಿತ್ರದ ಮೊದಲ ಪೋಸ್ಟರ್ ನ್ನು ಒಟ್ಟಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿವೆ,
ಹಿಂದಿಯ ಸಂಜು, ಗೋಲ್ಡ್, ರೇಸ್ 3 ಚಿತ್ರಗಳಿಗೆ ಮತ್ತು ಕ್ವೀನ್ ಮೂಲ ಚಿತ್ರದ ಪೋಸ್ಟರ್ ನ್ನು ವಿನ್ಯಾಸಗೊಳಿಸಿದ್ದ ಮುಂಬೈ ಮೂಲದ ಟ್ರಿಗ್ಗರ್ ಹ್ಯಾಪಿ ಸಂಸ್ಥೆಯ ಬಳಿ ದುಬಾರಿ ಪೋಸ್ಟರ್ ಮಾಡಿಸಲು ಚಿತ್ರತಂಡ ಯೋಜನೆ ಮಾಡಿದೆ. ಚಿತ್ರವನ್ನು ದಕ್ಷಿಣ ಭಾರತದ ಹಲವು ಕಡೆ ಮತ್ತು ವಿದೇಶಗಳಾದ ಪ್ಯಾರಿಸ್, ಫ್ರೆಜುಸ್ ಮತ್ತು ಅಥೆನ್ಸ್ ನಲ್ಲಿ ಶೂಟಿಂಗ್ ನಡೆದಿದ್ದು ಅದ್ದೂರಿ ತಾರಾಗಣವಿದೆ.