ಚೊಚ್ಚಲ ಟೆಸ್ಟ್‍ನಲ್ಲಿ ಗುಡುಗಿದ ಪೃಥ್ವಿ ಶಾ: ಶತಕ ಬಾರಿಸಿ ದಾಖಲೆಗಳನ್ನ ಬರೆದ ಮರಿ ಸಚಿನ್

ರಾಜ್‍ಕೋಟ್: ಮರಿ ಸಚಿನ್ ಪೃಥ್ವಿ ಶಾ ತಮ್ಮ ಚೊಚ್ಚಲ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.
ವೆಸ್ಟ್‍ಇಂಡೀಸ್ ವಿರುದ್ಧ ರಾಜ್‍ಕೋಟ್‍ನಲ್ಲಿ ಅರಂಭವಾರುವ ಟೆಸ್ಟ್ ಪಂದ್ಯದಲ್ಲಿ 18 ವರ್ಷದ ಪೃಥ್ವಿ ಶಾ 99 ಎಸೆತ ಎದುರಿಸಿ ಶತಕ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ಟೆಸ್ಟ್ ನಲ್ಲಿ ಶತಕ ಬಾರಿಸಿದ ವಿಶ್ವದ ನಾಲ್ಕನೆ ಅತಿ ಕಿರಿಯ ಬ್ಯಾಟ್ಸ್‍ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ 2001ರಲ್ಲಿ 17 ವರ್ಷದ ಅಶ್ರಫುಲ್ ಶ್ರೀಲಂಕಾ ವಿರುದ್ಧ ಶತಕ ಬಾರಿಸಿದ್ದರು. ಮಸಕಾಡ್ಜಾ 2001ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಸತಕ ಬಾರಿಸಿದ್ದರು. 1982ರಲ್ಲಿ ಪಾಕಿಸ್ತಾನದ ಸಲೀಂ ಮಲ್ಲಿಕ್ ¸18 ವರ್ಷ ವಯಸ್ಸಿನಲ್ಲಿ ಶ್ರೀಲಂಕಾ ವಿರುದ್ದ ಶತಕ ಬಾರಿಸಿದ್ದ ಅತಿ ಕಿರಿಯ ಕ್ರಿಕೆಟಿಗರು ಎಂಬ ಗೌರವಕ್ಕೆ ಪಾತ್ರರಾಗಿದ್ರು.

ಇಷ್ಟೆ ಅಲ್ಲದೇ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಪೃಥ್ವಿ ನಾಲ್ಕನೆ ಬ್ಯಾಟ್ಸ್ ಮನ್ ಎನಿಸಿದ್ದಾರೆ. 17ನೇ ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ 1990ರಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರು. 1979ರಲ್ಲಿ ಕಪಿಲ್ ದೇವ್ ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದರು. 1959ರಲ್ಲಿ ಬೇಗ್ ಇಂಗ್ಲೆಂಡ್ ವಿರುದ್ಧ ಮ್ಯಾಚೆಸ್ಟರ್‍ನಲ್ಲಿ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ ಮನ್‍ಗಳಾಗಿದ್ದಾರೆ.
ಇದಲ್ಲದೇ ಪೃಥ್ವಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪೃಥ್ವಿ 99 ಎಸೆತದಲ್ಲಿ ಶತಕ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಡ್ವೆನ್ ಸ್ಮಿತ್ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್‍ನಲ್ಲಿ ನಡೆದ ಟೆಸ್ಟ ಪಂದ್ಯದಲ್ಲಿ 93 ಎಸೆತದಲ್ಲಿ ಶತಕ ಬಾರಿಸಿದ್ದರು.2013ರಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‍ಮನ್ ಶಿಖರ್ ಧವನ್ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಕೇವಲ 85 ಎಸೆತದಲ್ಲಿ ಶತಕ ಬಾರಿಸಿ ಮಿಂಚಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ