ಅಸಮಾಧಾನಿತ ಕೈ ಶಾಸಕರಿಗೆ ಅವಕಾಶ ಕಲ್ಪಿಸಲು ಅರಣ್ಯ ಸಚಿವ ಶಂಕರ್​ ಮಂತ್ರಿ ಸ್ಥಾನಕ್ಕೆ ಕೊಕ್?

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಎರಡು ಪಕ್ಷಗಳ ಮುಖಂಡರಿಗೆ ಕಗ್ಗಂಟಾಗಿಯೇ ಇದೆ. ಸಂಪುಟ ವಿಸ್ತರಣೆ ಮಾಡುವುದೋ, ಬೇಡವೋ, ಮಾಡಿದರೆ, ಯಾರಿಗೆ ಸಚಿವ ಸ್ಥಾನ ನೀಡಬೇಕು, ನೀಡಬಾರದು ಎಂಬ ಗೊಂದಲದಲ್ಲೇ ಮುಖಂಡರು ಮುಳುಗಿದ್ದಾರೆ.
ಬಹುತೇಕ ಇದೇ ತಿಂಗಳ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ದೋಸ್ತಿ ಸರ್ಕಾರದ ನಾಯಕರು ಸುಳಿವು ನೀಡಿದ್ದಾರೆ. ಉಳಿದ ಏಳು ಸಚಿವ ಸ್ಥಾನದಲ್ಲಿ ಆರು ಸ್ಥಾನಗಳು ಕಾಂಗ್ರೆಸ್ ಪಾಲಿಗೆ ಉಳಿದಿವೆ. ಆರು ಸ್ಥಾನಕ್ಕೆ 22ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಿರುವುದು ನಾಯಕರ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ಪಕ್ಷದ ಶಾಸಕರ ಸಮಾಧಾನಪಡಿಸಲು, ಅವರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಕಾಂಗ್ರೆಸ್ ಕೋಟಾದಿಂದ ಸಚಿವರಾಗಿರುವ ಶಂಕರ್​ ಅವರನ್ನು ಸಂಪುಟದಿಂದ ಕೈ ಬಿಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆಯಲ್ಲಿ ಅರಣ್ಯ ಸಚಿವ ಶಂಕರ್ ಅವರನ್ನು ಕೈ ಬಿಡುವ ಬಗ್ಗೆ ಗಂಭೀರ ಚಿಂತೆನೆ ನಡೆದಿದೆ ಎನ್ನುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

ಸಚಿವ ಶಂಕರ್ ಕೈ ಬಿಡಲು ಕಾರಣಗಳು

  • ಸಚಿವಶಂಕರ್ಮೇಲೆಕಾಂಗ್ರೆಸ್ನಾಯಕರಿಗೆಅತೃಪ್ತಿ
  • ಈಗಾಗಲೇಮೈತ್ರಿಸರ್ಕಾರಕ್ಕೆ 118 ಶಾಸಕಬಲವಿದೆ. ಒಂದುವೇಳೆಸಚಿವಸ್ಥಾನದಿಂದಶಂಕರ್​ ಅವರನ್ನುಕೈಬಿಟ್ಟರೆ, ಅವರುಮೈತ್ರಿಗೆಗುಡ್​ಬೈಹೇಳಿದರೂಸರ್ಕಾರಕ್ಕೆಯಾವುದೇತೊಂದರೆಇಲ್ಲ
  • ಶಂಕರ್ಕುರುಬಸಮುದಾಯಕ್ಕೆಸೇರಿದವರು. ಆದರೆಪ್ರಭಾವಿನಾಯಕಅಲ್ಲ. ಹೀಗಾಗಿಅವರನ್ನುಕೈಬಿಟ್ಟರೂಕುರುಬಸಮುದಾಯಸರ್ಕಾರದಮೇಲೆಸಿಟ್ಟಾಗುವುದಿಲ್ಲ
  • ಪಕ್ಷದಲ್ಲಿತೀವ್ರಅಸಮಾಧಾನಗೊಂಡಿರುವಹಿರಿಯಶಾಸಕಎಂಟಿಬಿನಾಗರಾಜ್ಅವರಿಗೆಸ್ಥಾನಕಲ್ಪಿಸಲುಶಂಕರ್ಗೆಕೊಕ್
  • ಒಂದುವೇಳೆಈಸಂಪುಟವಿಸ್ತರಣೆವೇಳೆಎಂಟಿಬಿಯನ್ನುಸಚಿವರನ್ನಾಗಿಮಾಡದಿದರೆಪಕ್ಷಬಿಡೋದುಗ್ಯಾರಂಟಿ.
  • ಎಂಟಿಬಿತಾವಲ್ಲದೆಜೊತೆಗೆಹಲವುಶಾಸಕರನ್ನುಸೆಳೆಯುವಶಕ್ತಿಇದೆ. ಸಚಿವಸ್ಥಾನಸಿಗದಿದ್ದಲ್ಲಿ, ತಾವುಪಕ್ಷಬಿಡುವುದಲ್ಲದೇ, ತಮ್ಮೊಂದಿಗೆಇತರೆಶಾಸಕರನ್ನುಕರೆದುಕೊಂಡುಹೋಗಬಹುದು
  • ಎಂಟಿಬಿಯನ್ನುಆಪರೇಷನ್ಕಮಲದಿಂದತಪ್ಪಿಸಲುಶಂಕರ್ಕೈಬಿಡುವುದುಅನಿವಾರ್ಯಎಂದುಕೈಮುಖಂಡರುಚಿಂತನೆನಡೆಸಿದ್ದಾರೆಎನ್ನಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ