ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಕಾಂಗ್ರೇಸ್ ಸಚಿವರಿಗೆ ಉಪಹಾರ ಕೂಟ:

ಬೆಂಗಳೂರು, ಅ.4-ಕಾಂಗ್ರೆಸ್ ಸಚಿವರಿಗೆ ಉಪಹಾರ ಕೂಟ ಏರ್ಪಡಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ಎಲ್ಲರಿಗೂ ಬೆಳ್ಳಿ ತಟ್ಟೆ, ಲೋಟದಲ್ಲಿ ಉಪಹಾರ ನಡೆಸಿದ್ದಾರೆ.
ಶ್ರೀಮಂತ ರಾಜಕಾರಣಿ ಎಂದು ಹೆಸರು ಪಡೆದಿರವ ಡಿ.ಕೆ.ಶಿವಕುಮಾರ್ ಅವರು ಇಂದು ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಯಲ್ಲಿ ಕಾಂಗ್ರೆಸ್‍ನ ಎಲ್ಲಾ ಸಚಿವರು ಉಪಹಾರ ಕೂಟ ಏರ್ಪಡಿಸಿದ್ದರು. ಅದರಲ್ಲಿ ಬೆಳ್ಳಿಯ ತಟ್ಟೆ, ಲೋಟ ಮತ್ತು ಬೌಲ್‍ಗಳನ್ನು ಬಳಕೆ ಮಾಡಲಾಗಿದೆ.
ಡಿಕೆಶಿ ಅವರು ದಿನನಿತ್ಯ ತಮ್ಮ ಮನೆಯಲ್ಲಿ ಬೆಳ್ಳಿ ತಟ್ಟೆ, ಲೊಟದಲ್ಲೇ ಊಟ ಮಾಡುವುದು ಸಾಮಾನ್ಯ ಎನ್ನಲಾಗಿದೆ. ಅದೇ ರೀತಿ ಇಂದು ಸಚಿವರುಗಳಿಗೂ ಕೂಡ ಬೆಳ್ಳಿ ತಟ್ಟೆಯಲ್ಲಿ ಉಪಹಾರ ನೀಡಿದ್ದಾರೆ.
ಇಡ್ಲಿ, ದೋಸೆ ಸೇರಿದಂತೆ ಐದಾರು ಬಗೆಯ ಖಾದ್ಯಗಳು, ಸಿಹಿ ತಿಂಡಿ, ಬಾದಾಮಿ, ಕಾಫಿ ಟೀ ಸೇರಿದಂತೆ ಐಷರಾಮಿ ಉಪಹಾರ ಕೂಟವನ್ನು ನೀಡಿದ್ದಾರೆ.
ಸಂಪುಟದಲ್ಲಿರುವ ಬಹಳಷ್ಟು ಮಂದಿ ಸಚಿವರು ಸಮಾಜವಾದ ಮತ್ತು ಸಮತಾವಾದವನ್ನು ಪ್ರತಿಪಾದಿಸುತ್ತಾರೆ. ಆದರೆ ಡಿ.ಕೆಶಿ ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಬಡಿಸಿದಾಗ ಯಾರೂ ಕೂಡ ಆಕ್ಷೇಪ ವ್ಯಕ್ತಪಡಿಸದೆ ಅಂದವಾಗಿ ಸೇವಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ