ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಶತ್ರುಘ್ನ ಸಿನ್ಹಾ ಲೇವಡಿ

ಪಾಟ್ನಾ: ಬಿಜೆಪಿ ಈಗ ಒನ್‌ ಮ್ಯಾನ್‌ ಶೋ, ಟೂ ಮೆನ್‌ ಆರ್ಮಿ ಎಂಬಂತಾಗಿದೆ ಎಂದು ಬಾಲಿವುಡ್ ಹಿರಿಯ ನಟ, ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್‌ ಶಾ ಅವರನ್ನು ಲೇವಡಿ ಮಾಡಿದ್ದಾರೆ.

ಪಾಟ್ನಾದ ಸಾಹಿಬ್‌ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ, ನಾನು ಬಿಜೆಪಿಗಿಂತಲೂ ಭಾರತೀಯ ಜನತೆಗೆ ನಿಷ್ಠನಾಗಿದ್ದೇನೆ ಎಂದರು.

ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರದ ಮೂರು ಮಂತ್ರಿಗಳ ಹೆಸರನ್ನು ಕೇಳಲು ಪ್ರಯತ್ನಿಸಿ, ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ, ನಂತರ ಅಮಿತ್ ಶಾ ಹೆಸರು ಹೇಳುತ್ತಾರೆ, ಆದರೆ ಅವರು ಮಂತ್ರಿಗಳಲ್ಲ ,ಇಡೀ ದೇಶ ನೋಟು ಅಮಾನ್ಯೀಕರಣದಿಂದಾಗಿ ಬಳಲಿದೆ. ಜನ ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ, ಇದರ ಬೆನ್ನಲ್ಲೇ ಜಿಎಸ್ ಟಿ ಎಂಬ ಹೊಸ ಅಸ್ತ್ರ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ