ಬೆಂಗಳೂರು, ಅ.3- ಹಲವು ತಿಂಗಳುಗಳಿಂದ ಬಾಕಿ ಇರುವ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮತ್ತು ಎಐಯುಟಿಯುಸಿ ನೇತೃತ್ವದಲ್ಲಿ ರಾಜ್ಯಾದ್ಯಂತ ನಗರಕ್ಕೆ ಆಗಮಿಸಿರುವ ಆಶಾ ಕಾರ್ಯಕರ್ತೆಯರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ವೇತನ ಬಿಡುಗಡೆ ಆಗ್ರಹಿಸಿದರು.
ಆರೋಗ್ಯ ಇಲಾಖೆಯಡಿ ಹಳ್ಳಿ ಮತ್ತು ನಗರದ ಹಿಂದುಳಿದ ಪ್ರದೇಶಗಳಲ್ಲಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಸುರಕ್ಷಿತ ಹೆರಿಗೆ, ಸ್ವಾಸ್ಥ್ಯ ಶಿಶುವಿನ ಜನನ, ಆರೋಗ್ಯ ಮತ್ತು ಪೌಷ್ಠಿಕತೆಯ ಅರಿವು ಮೂಡಿಸುವುದು. ಕ್ಷಯ, ಮಲೇರಿಯಾ, ಡೇಂಘಿ, ಚಿಕೂನ್ಗುನ್ಯ ಇತ್ಯಾದಿ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಶ್ರಮಿಸುತ್ತಿದ್ದಾರೆ.
ಜತೆಗೆ ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ಕಳೆದ ಕೆಲವು ತಿಂಗಳಿನಿಂದ ವೇತನ ನೀಡಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆÇ್ರೀ ಧನ ನೀಡುತ್ತವೆ. ತಿಂಗಳಿಗೆ 3500ರೂ. ನಿಗದಿಯಾಗಿದೆ. ಬಹಳಷ್ಟು ಜಿಲ್ಲೆಗಳಲ್ಲಿ ಈ ಕಾರ್ಯಕರ್ತೆಯರಿಗೆ ವೇತನ ಬಿಡುಗಡೆಯಾಗಿಲ್ಲ. ಸರ್ಕಾರದ ನೂತನ ವೇತನ ಪಾವತಿ ವಿಧಾನ ಖಜಾನೆ 2ರಿಂದ ನೀಡಬೇಕಾಗಿದೆ ಎಂದು ಸಬೂಬು ಹೇಳಲಾಗುತ್ತಿದೆ. ಇದರಿಂದ ಕಾರ್ಯಕರ್ತೆಯರು ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ.
ಕೇಂದ್ರದ ಪೆÇ್ರೀ ಧನ ನೀಡುವ ಮಾದರಿ, ಆಶಾ ಸಾಫ್ಟ್ವೇತನ ಮಾದರಿಯಿಂದಾಗಿ ಕಾರ್ಯಕರ್ತೆಯರಿಗೆ ಕಳೆದ ಎರಡೂವರೆ ವರ್ಷದಿಂದ ಸಹಸ್ರಾರು ಆರ್ಥಿಕ ನಷ್ಟವಾಗಿದೆ.
ಹಾಗಾಗಿ ಕಾರ್ಯಕರ್ತೆಯರು ಇಂದು ಬೀದಿಗಿಳಿದಿದ್ದು, ಬಾಕಿ ಇರುವ ರಾಜ್ಯ ಸರ್ಕಾರದ ನಿಗದಿತ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೌರವ ಧನ ನೀಡಬೇಕೆಂದು ಕಾರ್ಯಕರ್ತೆಯರು ಒತ್ತಾಯಿಸಿದರು.