ಹಿಂದ್ ಸ್ವರಾಜ್ ಪಠ್ಯ ಎಲ್ಲ ಕಾಲಕ್ಕೂ ನಿರಂತರವಾಗಿ ವಿವರಿಸಿಕೊಳ್ಳಬೇಕಾದ ಅಗತ್ಯವಿದೆ: ಡಾ.ಚಂದನ್‍ಗೌಡ

ಬೆಂಗಳೂರು, ಅ.3- ಗಾಂಧೀಜಿಯವರ ಹಿಂದ್ ಸ್ವರಾಜ್ ಪಠ್ಯ ಎಲ್ಲ ಕಾಲಕ್ಕೂ ನಿರಂತರವಾಗಿ ವಿವರಿಸಿಕೊಳ್ಳಬೇಕಾದ ಹಾಗೂ ಪ್ರಸ್ತುತವಾದ ಸಾಂಸ್ಕøತಿಕ ಪಠ್ಯ ಎಂದು ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಚಂದನ್‍ಗೌಡ ಹೇಳಿದರು.

ಗಾಂಧಿ ಜಯಂತಿ ಪ್ರಯುಕ್ತ ವಿವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಚರಿತ್ರೆಯನ್ನು ಹೊಸ ರೀತಿಯಲ್ಲಿ ನೋಡಲು ಯತ್ನಿಸಿದರು ಮತ್ತು ಶೂದ್ರರ ದೈಹಿಕ ಶ್ರಮವನ್ನು ಭಾರತದ ನಿಜವಾದ ಶ್ರಮಜೀವನದ ಪ್ರತೀಕವೆಂದು ಗಾಂಧೀಜಿ ಬಿಂಬಿಸಿದರು. ನಂತರ ಬಂದ ಗಾಂಧಿ ಶಿಷ್ಯರಾದ ಜೆ.ಪಿ ಕೂಡ ಗಾಂಧಿಯ ಹಾದಿಯಲ್ಲೇ ಸಂಪೂರ್ಣ ಕ್ರಾಂತಿಯನ್ನು ರೂಪಿಸಲೆತ್ನಿಸಿದರು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ.ಬಿ.ಕೆ.ರವಿ ಮಾತನಾಡಿ, ಇಂದಿನ ಪ್ರಕ್ಷುಬ್ಧ ಸ್ಥಿತಿಯಲ್ಲಿ ಅಹಿಂಸಾ ಮಾರ್ಗವೊಂದೇ ಅಂತಿಮ ಉತ್ತರ ಎಂದು ಹೇಳಿದರು.
ಬೆಂವಿವಿ ಕುಲಪತಿ ಪೆÇ್ರ. ಕೆ.ಆರ್. ವೇಣುಗೋಪಾಲ್ ಮಾತನಾಡಿ, ಮಹಾತ್ಮ ಗಾಂಧೀಜಿ ದೈವತ್ವದ ಎತ್ತರಕ್ಕೆ ಏರಿದ ಮಹಾಸಾಧಕ ಎಂದು ಬಣ್ಣಿಸಿದರು.
ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನಟರಾಜ್ ಹುಳಿಯಾರ್, ಸಂಭ್ರಮ್ ಕಾಲೇಜಿನ ಪೆÇ್ರ.ಮಿಶ್ರಾ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ