ಮೈಸೂರಿನ ಗೀತಾ ಗೋಪಿನಾಥ್ ಈಗ ಐಎಂಎಫ್ ನೂತನ ಮುಖ್ಯ ಆರ್ಥಿಕ ತಜ್ಞೆ

ನವದೆಹಲಿಮೈಸೂರು ಮೂಲದ ಹಾರ್ವರ್ಡ್ ಯೂನಿವರ್ಸಿಟಿ ಪ್ರಾಧ್ಯಾಪಕ ಗೀತಾ ಗೋಪಿನಾಥ್ ಅನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಅರ್ಥಶಾಸ್ತ್ರಜ್ಞರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಸಂಸ್ಥೆ ಟ್ವೀಟ್ ಮಾಡಿದೆ.

ಇದೆ ವರ್ಷ ಡಿಸೆಂಬರ್ ನಲ್ಲಿ ನಿವೃತ್ತಿಯಾಗಲಿರುವ ಅರ್ಥಶಾಸ್ತ್ರಜ್ಞ ಮೌರಿ ಓಬ್ಸ್ಟ್ಫೆಲ್ಡ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಐಎಂಎಫ್ ತಿಳಿಸಿದೆ. ಗೀತಾ ಗೋಪಿನಾಥ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಇಂಟರ್ನ್ಯಾಷನಲ್ ಸ್ಟಡೀಸ್ ಅಂಡ್ ಎಕನಾಮಿಕ್ಸ್ನ ಜಾನ್ ಜ್ವಾನ್ಸ್ಟ್ರಾ ಪ್ರೊಫೆಸರ್ ಆಗಿದ್ದಾರೆ. ಅವರ ಸಂಶೋಧನೆಯು ಅಂತರರಾಷ್ಟ್ರೀಯ ಹಣಕಾಸು ಮತ್ತು ಸ್ಥೂಲ ಅರ್ಥಶಾಸ್ತ್ರದ ಬಗ್ಗೆ ಕೇಂದ್ರೀಕರಿಸುತ್ತದೆ.

“ಗೀತಾ ಗೋಪಿನಾಥ್ ಶೈಕ್ಷಣಿಕ ಹಿನ್ನಲೆ, ಬೌದ್ಧಿಕ ನಾಯಕತ್ವ ದಾಖಲೆಯನ್ನು ಮತ್ತು ವ್ಯಾಪಕ ಅಂತರಾಷ್ಟ್ರೀಯ ಅನುಭವವನ್ನು ಹೊಂದಿದ್ದರಿಂದ ಅವರನ್ನು ಐಎಮ್ಎಫ್ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಅಂತಹ ಪ್ರತಿಭಾನ್ವಿತ ವ್ಯಕ್ತಿಯನ್ನು ಹೆಸರಿಸಲು ಸಂತಸವಾಗುತ್ತಿದೆ ಎಂದು ಐಎಮ್ಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್ ಲಾಗರ್ಡ್ ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ